ರಾಯಚೂರು: ಮದುವೆ ಸುದ್ದಿ ಅನೌನ್ಸ್ ಮಾಡಿದ ಬೆನ್ನಲ್ಲೇ ನಟ ಡಾಲಿ ಧನಂಜಯ್ ಅವರು ಮಂತ್ರಾಲಯಕ್ಕೆ ತೆರಳಿ ರಾಯರ ಆಶೀರ್ವಾದ ಪಡೆದರು.
ಬಳಿಕ ನಗರದ ಸ್ಟೇಷನ್ ರಸ್ತೆ ಬಳಿ ಖಾಸಗಿ ಮಾಲ್ ಉದ್ಘಾಟನೆಗೆ ಬಂದಿದ್ದ ಡಾಲಿ ಧನಂಜಯ್ ನೋಡಲು ಅಭಿಮಾನಿಗಳು ನೂಕುನುಗ್ಗಲು ಮಾಡಿದರು. ಈ ಸಂದರ್ಭದಲ್ಲಿ ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದ ಘಟನೆ ನಡೆಯಿತು.
ಇನ್ನೂ ಈ ವೇಳೆ ನಟ ಡಾಲಿ ಧನಂಜಯ್ ಕೂಲಿಂಗ್ ಗ್ಲಾಸ್ ಕಿತ್ತಿಕೊಳ್ಳಲು ಅಭಿಮಾನಿಯೊಬ್ಬ ಯತ್ನಿಸಿದ ಘಟನೆ ನಡೆದಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರನ್ನೂ ಬಿಡದೆ ಅಭಿಮಾನಿಗಳು ತಳ್ಳಾಟ ನಡೆಸಿದರು.
ವಿದ್ಯಾರ್ಥಿನಿಯರು ಕಾಲೇಜು ಕಟ್ಟಡದ ಟೆರೇಸ್ ಏರಿ ಡಾಲಿ ಧನಂಜಯ್ ನೋಡಲು ಹರಸಾಹಸ ಪಟ್ಟರು. ವಿದ್ಯಾರ್ಥಿನಿಯರನ್ನ ಕೆಳಗಿಳಿಸಲು ಉಪನ್ಯಾಸಕರು ಕೋಲು ಹಿಡಿದು ಬರಬೇಕಾಯಿತು.
ಈ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನ ತೋರಿಸುವ ಪ್ರೀತಿ ರಫ್ ಆ್ಯಂಡ್ ಟಫ್ ಆದ್ರೂ ಅಗಾಧವಾದದ್ದು. ಖುಷಿಯಾಗುತ್ತೆ ರಾಯಚೂರಿಗೆ ಮತ್ತೆ ಮತ್ತೆ ಬರುತ್ತೇನೆ ಎಂದರು. ಝಿಬ್ರಾ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುತ್ತೆ ಎಲ್ಲರೂ ನೋಡಿ ಎಂದು ತಿಳಿಸಿದರು.