ಕೊಲೆ ಪ್ರಕರಣದಲಿ ನಟ ದರ್ಶನ್‌ಗೆ ಜಾಮೀನು ಮಂಜೂರು: ಬ್ಲೆಸ್ಡ್‌ ಎಂದ ವಿಜಯಲಕ್ಷ್ಮಿ

sampriya
ಬುಧವಾರ, 30 ಅಕ್ಟೋಬರ್ 2024 (14:10 IST)
photo credit X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್ ಅವರಿಗೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರಾದ ಬೆನ್ನಲ್ಲೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೈಷ್ಣೋದೇವಿ ಮಂದಿರದ ಚಿತ್ರ ಹಂಚಿಕೊಂಡಿರುವ ವಿಜಯಲಕ್ಷ್ಮಿ ಅವರು ತ್ಯಾಂಕ್‌ಫುಲ್, ಗ್ರೇಟ್‌ಫುಲ್ ಹಾಗೂ ಬ್ಲೆಸ್ಡ್‌ ಎಂದು ಬರೆದುಕೊಂಡಿದ್ದಾರೆ. ದರ್ಶನ್ ಅವರಿಗೆ ಜಾಮೀನು ಸಿಕ್ಕಿದ್ದರಿಂದ ವಿಜಯಲಕ್ಷ್ಮಿ ಅವರು ಈ ರೀತಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಎಲ್ಲ ಪೋಸ್ಟ್‌ಗಳನ್ನೂ ಡಿಲೀಟ್ ಮಾಡಿದ್ದಾರೆ. ದರ್ಶನ್ ಬಂಧನ ಕುರಿತು ಅಭಿಮಾನಿಗಳಿಗೆ ಬರೆದಿದ್ದ ಪತ್ರದ ಒಂದೆರಡು ಪೋಸ್ಟ್ ಮಾತ್ರ ಇವೆ.

ಇನ್ನು ದರ್ಶನ್ ಅವರು ಇಂದೇ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗುವ ಸಂಭವ ಇರುವುದರಿಂದ ವಿಜಯಲಕ್ಷ್ಮಿ ಅವರು ಹಾಗೂ ಕುಟುಂಬದವರು ಈಗಾಗಲೇ ಬಳ್ಳಾರಿಗೆ ತಲುಪಿದ್ದಾರೆ.

ಸದ್ಯ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ಮೇಲಿನ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿತ್ತು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಣ್ಣನಿಗೆ ಹೃದಯಾಘಾತ, ಬೆಂಗಳೂರಿಗೆ ಬಂದು ಆರೋಗ್ಯ ವಿಚಾರಿಸಿದ ನಟ ರಜನಿಕಾಂತ್

ಬೆಂಗಳೂರಿನಲ್ಲಿ ಕಾಂತಾರ ಚಾಪ್ಟರ್ 1 ಸಕ್ಸಸ್‌ ಮೀಟ್‌: ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದ ಚಿತ್ರತಂಡ

ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಪವಿತ್ರಾ ಗೌಡಗೆ ಮತ್ತೆ ತಪರಾಕಿ ನೀಡಿದ ಕೋರ್ಟ್

ನನಗಾಗಿ ನನ್ನ ಹುಡುಗ ಯುದ್ಧ ಮಾಡಕ್ಕೂ ರೆಡಿ ಇರಬೇಕು: ರಶ್ಮಿಕಾ ಮಂದಣ್ಣ

ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನ್ನೆ ಖಾನ್ ತಾಯಿ ಇನ್ನಿಲ್ಲ

ಮುಂದಿನ ಸುದ್ದಿ
Show comments