Daily Horoscope

Select Your Language

Notifications

webdunia
webdunia
webdunia
webdunia

ಪಾವನಾ ಪತಿಯಾದ ನಟ ಚಿಕ್ಕಣ್ಣ

Chikkanna wedding
ಮೈಸೂರು: ಸ್ಯಾಂಡಲ್ ವುಡ್ ನಟ ಚಿಕ್ಕಣ್ಣ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾವನಾ ಜೊತೆ ಹಸೆಮಣೆಯೇರಿದ್ದಾರೆ.

ಮೈಸೂರಿನ ಕಲ್ಯಾಣ ಮಂಟಪವೊಂದರಲ್ಲಿ ಚಿಕ್ಕಣ್ಣ ಮದುವೆ ಅದ್ಧೂರಿಯಾಗಿ ನೆರವೇರಿದೆ. ಇಂದು 10.45 ರಿಂದ 11.25 ರ ಶುಭ ಮುಹೂರ್ತದಲ್ಲಿ ಪಾವನಾ ಕೊರಳಿಗೆ ಚಿಕ್ಕಣ್ಣ ತಾಳಿ ಕಟ್ಟಿದ್ದಾರೆ.

ನಿನ್ನೆ ನಟನ ವಿವಾಹ ಆರತಕ್ಷತೆ ಅದ್ಧೂರಿಯಾಗಿ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದ್ದರು. ನಟ ಶ್ರೀಮುರಳಿ, ಮುಖ್ಯಮಂತ್ರಿ ಚಂದ್ರು, ರಕ್ಷಿತಾ ಪ್ರೇಮ್, ನಿರ್ಮಾಪಕ ಉಮಾಪತಿ ಗೌಡ, ನಟಿ ತಾರಾ ಸೇರಿದಂತೆ ಅನೇಕ ಗಣ್ಯರು ಬಂದಿದ್ದರು.

ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಕಾಮಿಡಿ ಟೈಮಿಂಗ್ ಮೂಲಕ ಕನ್ನಡಿಗರ ಮನ ಗೆದ್ದಿರುವ ಚಿಕ್ಕಣ್ಣ, 'ಉಪಾಧ್ಯಕ್ಷ' ಸಿನಿಮಾದ ಮೂಲಕ ನಾಯಕ ನಟನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಸರಳ ಹಾಗೂ ಶಾಸ್ತ್ರೋಕ್ತವಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರು, ನಿರ್ದೇಶಕರು ಹಾಗೂ ತಂತ್ರಜ್ಞರು ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕಣ್ಣ ಅವರ ಮದುವೆಯ ಸುಂದರ ಚಿತ್ರಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳ ಮಳೆಯನ್ನೇ ಸುರಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕನೇ ದಿನಕ್ಕೆ ಹೇಗಿದೆ ಟಾಕ್ಸಿಕ್ ಕಮಾಲ್: ಒಟ್ಟು ಗಳಿಕೆ ಎಷ್ಟಾಯ್ತು ಇಲ್ಲಿದೆ ವಿವರ