Daily Horoscope

Select Your Language

Notifications

webdunia
webdunia
webdunia
webdunia

ನಾಲ್ಕನೇ ದಿನಕ್ಕೆ ಹೇಗಿದೆ ಟಾಕ್ಸಿಕ್ ಕಮಾಲ್: ಒಟ್ಟು ಗಳಿಕೆ ಎಷ್ಟಾಯ್ತು ಇಲ್ಲಿದೆ ವಿವರ

Toxic Yash
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರದ ಪ್ರದರ್ಶನವನ್ನು ಮುಂದುವರಿಸಿದೆ. ಬಿಡುಗಡೆಯಾದ 4ನೇ ದಿನವೂ ಭಾರಿ ಪ್ರದರ್ಶನ ಕಾಣುವ ಮೂಲಕ ಚಿತ್ರವು ಒಟ್ಟು ಜಾಗತಿಕ ಗಳಿಕೆಯಲ್ಲಿ ದೊಡ್ಡ ಮಟ್ಟದ ಮೈಲಿಗಲ್ಲನ್ನು ದಾಟಿದೆ.
 
ಚಿತ್ರವು ಬಿಡುಗಡೆಯಾದ 4ನೇ ದಿನದಂದು ಭಾರತದಾದ್ಯಂತ ಒಟ್ಟು 24.50 ಕೋಟಿ ರೂಪಾಯಿ ನೆಟ್ ಗಳಿಕೆ ಮಾಡಿದೆ. ಭಾಷಾವಾರು ಲೆಕ್ಕಾಚಾರ ನೋಡುವುದಾದರೆ, 4ನೇ ದಿನದಂದು ಹಿಂದಿ ಆವೃತ್ತಿಯು ಸಿಂಹಪಾಲು ಪಡೆದುಕೊಂಡಿದ್ದು 15.50 ಕೋಟಿ ರೂಪಾಯಿ ಗಳಿಸಿದೆ. ಇನ್ನು ಮೂಲ ಭಾಷೆಯಾದ ಕನ್ನಡದಲ್ಲಿ 6.60 ಕೋಟಿ ರೂಪಾಯಿ, ತೆಲುಗಿನಲ್ಲಿ 1.50 ಕೋಟಿ ರೂಪಾಯಿ, ತಮಿಳಿನಲ್ಲಿ 75 ಲಕ್ಷ ರೂಪಾಯಿ ಹಾಗೂ ಮಲಯಾಳಂ ಆವೃತ್ತಿಯಲ್ಲಿ 15 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ವಿಶೇ‍ಷವಾಗಿ 4ನೇ ದಿನದಂದು ಕನ್ನಡ ಆವೃತ್ತಿಯು ಶೇಕಡಾ 47.23% ರಷ್ಟು ಗರಿಷ್ಠ ಥಿಯೇಟರ್ ಆಕ್ಯುಪೆನ್ಸಿ ಹೊಂದುವ ಮೂಲಕ ಮುಂಚೂಣಿಯಲ್ಲಿತ್ತು.
 
ಮೊದಲ 4 ದಿನಗಳ ಮುಕ್ತಾಯಕ್ಕೆ 'ಟಾಕ್ಸಿಕ್' ವಿಶ್ವದಾದ್ಯಂತ ಒಟ್ಟು 254.75 ಕೋಟಿ ರೂಪಾಯಿ ಗ್ರೋಸ್ ಗಳಿಕೆ ದಾಖಲಿಸಿದೆ. ಇದರಲ್ಲಿ ಭಾರತದ ಒಟ್ಟು ನೆಟ್ ಗಳಿಕೆ 190.45 ಕೋಟಿ ರೂಪಾಯಿಯಾಗಿದ್ದು, ಗ್ರೋಸ್ ಲೆಕ್ಕಾಚಾರದಲ್ಲಿ 227.50 ಕೋಟಿ ರೂಪಾಯಿಯಷ್ಟಾಗುತ್ತದೆ. ವಿದೇಶಿ ಮಾರುಕಟ್ಟೆಯಿಂದ ಸಿನಿಮಾ ಇದುವರೆಗೆ 27.25 ಕೋಟಿ ರೂಪಾಯಿ ಬಾಚಿಕೊಂಡಿದೆ.
 
ಇಲ್ಲಿಯವರೆಗಿನ ಭಾರತದ ಒಟ್ಟು ಭಾಷಾವಾರು ಕಲೆಕ್ಷನ್ ನೋಡುವುದಾದರೆ, ಹಿಂದಿ ಮಾರುಕಟ್ಟೆಯಲ್ಲಿ ಗರಿಷ್ಠ ಅಂದರೆ ಸುಮಾರು 114.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಕನ್ನಡ ಆವೃತ್ತಿಯಿಂದ 43.40 ಕೋಟಿ ರೂಪಾಯಿ, ತೆಲುಗಿನಿಂದ 22 ಕೋಟಿ ರೂಪಾಯಿ, ತಮಿಳಿನಿಂದ 8.50 ಕೋಟಿ ರೂಪಾಯಿ ಹಾಗೂ ಮಲಯಾಳಂ ಆವೃತ್ತಿಯಿಂದ 2.05 ಕೋಟಿ ರೂಪಾಯಿ ಗಳಿಕೆಯಾಗಿದೆ.
 
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವು ಉತ್ತರ ಭಾರತ ಹಾಗೂ ಕರ್ನಾಟಕದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದ್ದು, ಪ್ರಪಂಚದಾದ್ಯಂತ ಯಶ್ ಅವರ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಪ್ರಿಯತೆಯಲ್ಲಿರುವಾಗಲೇ ನಂದಗೋಕುಲ ಧಾರವಾಹಿ ಬಿಟ್ಟ ಕೇಶವ ಪಾತ್ರಧಾರಿ: ಇದರ ಹಿಂದಿದೆ ಬಲವಾದ ಕಾರಣ