ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ಅವರ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ.
ನಿನ್ನೆ ನಡೆದ ಆರತಕ್ಷತೆಯಲ್ಲಿ ಸಿನಿಮಾರಂಗದವರು, ರಾಜಕೀಯ ಗಣ್ಯರು ಹಾಗೂ ಸಾವಿರಾರು ಧನಂಜಯ್ ಸಲೆಬ್ರಿಟಿಗಳು ಭಾಗವಹಿಸಿದ್ದರು.
D
ಇದೀಗ ಇಂದು ಧನಂಜಯ್ ಅವರು ಡಾ.ಧನ್ಯತಾ ಅವರನ್ನು ವಿವಾಹವಾದರು. ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಧನ್ಯತಾ ಜೊತೆ ಧನಂಜಯ್ ಹಸೆಮಣೆ ಏರಿದರು. ಅರಸೀಕೆರೆಯ ಕಾಳೇನಹಳ್ಳಿ ಹುಡುಗ ಚಿತ್ರದುರ್ಗದ ಶಿವಪುರದ ಹುಡುಗಿಯ ಜೊತೆ ಕಲ್ಯಾಣವಾದರು.
ತಾಳಿ ಕಟ್ಟುವ ವೇಳೆ ಧನಂಜಯ್ ಅವರನ್ನು ಪುರೋಹಿತರು ಮೂರು ಗಂಟು ಹಾಕಿದ್ದೀಯಲ್ಲ ಎಂದು ಕೇಳುತ್ತಾರೆ. ಅದಕ್ಕೆ ಧನಂಜಯ್ ಹುಂ ಹಾಕಿದ್ದೀನಿ ಎಂದು ನಗುತ್ತಲೇ ಉತ್ತರಿಸುತ್ತಾರೆ.
ಭಾನುವಾರ ಬೆಳಗ್ಗೆಯಿಂದಲೇ ಧಾರಾ ಮುಹೂರ್ತದ ದಿನದ ಶಾಸ್ತ್ರಗಳು ನಡೆಯಿತು. ಮೊದಲು ಮಂಟಪಕ್ಕೆ ದೇವತಾ ಪ್ರವೇಶ ನಂತರ ನವ ಪ್ರಧಾನ ಕಳಸ ಪೂಜೆ, ಕನ್ಯಾದಾನ, ಸಂಬಂಧ ಮಾಲೆ ಅರ್ಪಣೆ ಶಾಸ್ತ್ರ ನೆರವೇರಿದೆ.