Select Your Language

Notifications

webdunia
webdunia
webdunia
webdunia

ಐಶ್ವರ್ಯ ರೈ ಬೆನ್ನಲ್ಲೇ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಅಭಿಷೇಕ್​ ಬಚ್ಚನ್: ಕಾರಣ ಏನು ಗೊತ್ತಾ

Actress Aishwarya Rai Bachchan

Sampriya

ಮುಂಬೈ , ಬುಧವಾರ, 10 ಸೆಪ್ಟಂಬರ್ 2025 (14:55 IST)
Photo Credit X
ಮುಂಬೈ: ಬಹುಭಾಷಾ ನಟಿ ಐಶ್ವರ್ಯ ರೈ ಬಚ್ಚನ್ ಅವರ ಬೆನ್ನಲ್ಲೇ ಅವರ ಪತಿ, ನಟ ಅಭಿಷೇಕ್‌ ಬಚ್ಚನ್‌ ಕೂಡಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಬ್ಬರೂ ಕೂಡಾ ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಮೊರೆಹೋಗಿದ್ದಾರೆ. 

ಐಶ್ವರ್ಯ ರೈ ಅವರು ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ವೈಯಕ್ತಿಕ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಭಿಷೇಕ್ ಬಚ್ಚನ್ ಕೂಡಾ ಪತ್ನಿಯ ಹಾದಿಯಲ್ಲೇ ಸಾಗಿದ್ದಾರೆ.

ತಮ್ಮ ಪ್ರಚಾರ ಮತ್ತು ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿಕೊಳ್ಳುವಂತೆ ಮತ್ತು ವೆಬ್‌ಸೈಟ್‌ಗಳು ಮತ್ತು ವೇದಿಕೆಗಳು ತಮ್ಮ ಚಿತ್ರ, ಹೋಲಿಕೆ, ವ್ಯಕ್ತಿತ್ವ ಮತ್ತು ಲೈಂಗಿಕವಾಗಿ ಸ್ಪಷ್ಟವಾದ ವಿಷಯಗಳು ಸೇರಿದಂತೆ ನಕಲಿ ವೀಡಿಯೊಗಳನ್ನು ಬಳಸುವುದನ್ನು ನಿರ್ಬಂಧಿಸಬೇಕೆಂದು ಎಂದು ಅಭಿಷೇಕ್‌ ಬಚ್ಚನ್‌ ಕೋರಿದ್ದಾರೆ.  ಮಧ್ಯಾಹ್ನ 2.30 ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.

ನಟಿ ಐಶ್ವರ್ಯಾ ರೈ ಇದೇ ರೀತಿಯ ಪ್ರಕರಣದಲ್ಲಿ ಮಂಗಳವಾರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಒಂದು ದಿನದ ನಂತರ ಈ ಅರ್ಜಿ ಬಂದಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ನಡೆಸಲಿದ್ದಾರೆ.  

ನಟ, ನಟಿಯರ ನಕಲು ಮಾಡುವುದು, ಅವರ ಚಿತ್ರಗಳು, ಅವರ ಧ್ವನಿ, ವ್ಯಕ್ತಿತ್ವವನ್ನು ಪ್ರಚಾರಕ್ಕಾಗಿ, ಜಾಹೀರಾತಿಗಾಗಿ ಇನ್ನೂ ಕೆಲವು ಕಾರಣಗಳಿಗಾಗಿ ಬಳಸಲಾಗುತ್ತದೆ. ಆದರೆ ಇದು ಮೂಲ ವ್ಯಕ್ತಿಯ ವ್ಯಕ್ತಿತ್ವದ ಹಕ್ಕಿನ ಉಲ್ಲಂಘನೆ ಆಗಿದ್ದು, ಇದೀಗ ಹಲವು ನಟ-ನಟಿಯರು ಒಬ್ಬರಾದ ಮೇಲೆ ಒಬ್ಬರಂತೆ ತಮ್ಮ ವ್ಯಕ್ತಿತ್ವ ಹಕ್ಕಿನ ರಕ್ಷಣೆಗೆ ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣ್ಣು, ದುಡ್ಡು ಕದೀತಾರೆ ಸಾರ್: ಪರಪ್ಪನ ಅಗ್ರಹಾರದ ಕರಾಳ ಕತೆ ಬಿಚ್ಚಿಟ್ಟ ಮಡೆನೂರು ಮನು