ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ವ್ಯಕ್ತಿತ್ವದ ಹಕ್ಕು ರಕ್ಷಣೆ ಕಕೋರಿ ಹೈಕೋರ್ಟ್ ಮೇಟ್ಟಿಲೇರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಪೋಟೋ ಹಾಗೂ ಪ್ರಚಾರಕ್ಕೆ ತಮ್ಮ ಬುದ್ಧಿಮತ್ತೆಯಿಂದ ಸೃಷ್ಟಿಸಿದ ಅಶ್ಲೀಲ ಕಂಟೆಂಟ್‌ಗಳನ್ನು ಬಳಸದಂತೆ ತಡೆ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇಮೇಜ್, ಹೋಲಿಕೆ ಮತ್ತು ವ್ಯಕ್ತಿತ್ವವನ್ನು ಬಳಸದಂತೆ ನಿರ್ಬಂಧಿಸಲು ವಿವಿಧ ಘಟಕಗಳ ವಿರುದ್ಧ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ, ಪ್ರತಿವಾದಿ ಘಟಕಗಳಿಗೆ ತಡೆಯಾಜ್ಞೆ ನೀಡುವ ಮಧ್ಯಂತರ ಆದೇಶವನ್ನು ಹೊರಡಿಸುವುದಾಗಿ ಹೈಕೋರ್ಟ್ ಮೌಖಿಕವಾಗಿ ಸೂಚಿಸಿತು.
ಐಶ್ವರ್ಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ ಅವರು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ವಾದ ಮಂಡಿಸಿ, ಕೆಲವು ಸಂಪೂರ್ಣವಾಗಿ ಅವಾಸ್ತವಿಕ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಈ ಹಿನ್ನೆಲೆ ನಟಿ ತಮ್ಮ ಪ್ರಚಾರ ಮತ್ತು ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ.
ನಮ್ಮ ಕಕ್ಷಿದಾರರು ಮುಂದೆ ತಮ್ಮ ಕಕ್ಷಿದಾರರು ತಮ್ಮ ಪ್ರಚಾರ ಮತ್ತು ವ್ಯಕ್ತಿತ್ವದ ಹಕ್ಕುಗಳನ್ನು ಜಾರಿಗೊಳಿಸಲು ಕೋರುತ್ತಿದ್ದಾರೆ ಎಂದು ಸಲ್ಲಿಸಿದರು.
ಐಶ್ವರ್ಯಾ ರೈ ಅವರ ವಾಲ್‌ಪೇಪರ್‌ಗಳು, ಫೋಟೋಗಳನ್ನು ಬಳಸಿಕೊಳ್ಳಲಾಗಿದೆ.. ಇನ್ನೂ ಕೆಲ ಶರ್ಟ್‌ಗಳಲ್ಲಿಯೂ ನಟಿಯ ಚಿತ್ರಗಳನ್ನು ಮಾರಾಟ ಮಾಡಲಾಗಿದೆ" ಎಂದು ಅವರು ಹೇಳಿದರು.
ಸೇಥಿ ಅದಲ್ಲದೆ ನಟಿಯ ಅನುಮತಿಯಿಲ್ಲದೆ ಚಿತ್ರಗಳನ್ನು ಬಳಸಿಕೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ.