Webdunia - Bharat's app for daily news and videos

Install App

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

Sampriya
ಸೋಮವಾರ, 30 ಜೂನ್ 2025 (16:55 IST)
ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ ಕಿಚ್ಚ ಸುದೀಪ್‌ ಸಾರಥ್ಯದಲ್ಲಿ ಇದುವರೆಗೆ 11 ಸೀಸನ್‌ಗಳನ್ನು ಪೊರೈಸಿದೆ. 

ಆದರೆ ಸೀಸನ್ 11 ನಡೆಯುತ್ತಿರುವ ವೇಳೆಯೇ ಮುಂದಿನ ಸೀಸನ್‌ ನಡೆಸಿಕೊಡುವುದಿಲ್ಲ ಎಂದು ಕಿಚ್ಚ ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಇದು ಬಿಗ್‌ಬಾಸ್ ಪ್ರಿಯರಿಗೆ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನು ಮೂಡಿಸಿತು. ಇದೀಗ ಬಿಗ್‌ಬಾಸ್ ತಂಡದ ಕಡೆಯಿಂದ ಹಾಗೂ ಕಿಚ್ಚ ಸುದೀಪ್ ಅವರಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ.

ಹೌದು, ಕಿಚ್ಚ ಸುದೀಪ್ ಅವರೇ 12ನೇ ಸೀಸನ್‌ಗೂ ನಿರೂಪಣೆ ಮಾಡುವುದಾಗಿ ಸ್ಪಷ್ಟನೆ ಸಿಕ್ಕಿದೆ. ಬಿಗ್‌ಬಾಸ್ ಸಂಯೋಜಕರು ಹಾಗೂ ಕಲರ್ಸ್‌ ತಂಡ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ.

11ನೇ ಸೀಸನ್‌ ಸಂದರ್ಭದಲ್ಲಿ ನಿರೂಪಕ ಕಿಚ್ಚ ಸುದೀಪ್ ವಿದಾಯ ಹೇಳಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚೆಗಳು ಶುರುವಾಗಿದ್ವು, ಈ ಬಗ್ಗೆ ಕಿಚ್ಚ ಸುದೀಪ್ ಕೂಡಾ ಕಾದು ನೋಡಿ ಅನ್ನೋ ಅಭಿಪ್ರಾಯ ಹಂಚಿಕೊಂಡಿದ್ರು. ಇದೀಗ ಮತ್ತೆ 12ನೇ ಸೀಸನ್ ನಡೆಸಿಕೊಡುವ ಬಗ್ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಕಿಚ್ಚ.

ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್  ವಿದಾಯ ಹೇಳಿರುವುದು ಅವರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಅದಲ್ಲದೆ ಸುದೀಪ್ ಇಲ್ಲದೆ ಬಿಗ್‌ಬಾಸ್ ಅನ್ನು ಕಲ್ಪಿಸಿಕೊಳ್ಳುವುದು ಕಷ್ಟ ಎಂಬ ಕೂಗು ವ್ಯಕ್ತವಾಗಿತ್ತು.  ಹೀಗಾಗಿ ಕಿಚ್ಚ ಸುದೀಪ್ ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮವನ್ನ ಮುಂದುವರಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

ನಟಿ ಶೆಫಾಲಿ ಜರಿವಾಲಾ ಸಾವಿಗೆ ನಿಜ ಕಾರಣ ಕೊನೆಗೂ ಬಯಲು

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಮುಂದಿನ ಸುದ್ದಿ
Show comments