ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗಕ್ಕೆ ಬಂದು ಇಂದಿಗೆ 46 ವರ್ಷ! ವಿಪರ್ಯಾಸವೆಂದರೆ ಇದೇ ದಿನ ಅವರು ತೀರಿಕೊಂಡು ನಾಲ್ಕು ತಿಂಗಳಾಗಿದೆ.
1976 ರಲ್ಲಿ ಪ್ರೇಮದ ಕಾಣಿಕೆ ಸಿನಿಮಾ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. ಆ ಸಿನಿಮಾದಲ್ಲಿ ನಟಿಸುವಾಗ ಅವರಿಗೆ ಇನ್ನೂ ಆರು ತಿಂಗಳು. ಇದಾದ ಬಳಿಕ ಬಾಲನಟನಾಗಿ ಎಲ್ಲರ ಮನಸ್ಸು ಗೆದ್ದು, ಬಳಿಕ ಪವರ್ ಸ್ಟಾರ್ ಆಗಿ ಬೆಳೆದು ನಿಂತಿದ್ದು ಎಲ್ಲರಿಗೂ ಗೊತ್ತೇ ಇದೆ.
ವಿಪರ್ಯಾಸವೆಂದರೆ ಅವರ ಈ ಸಂಭ್ರಮದ ಕ್ಷಣದಲ್ಲಿ ಅವರೇ ನಮ್ಮೊಂದಿಗಿಲ್ಲ. ಅದೂ ಅವರ ನಿಧನದ ದಿನವೇ ಇಂತಹ ವಿಶೇಷ ದಿನ ಎಂಬುದು ಅಭಿಮಾನಿಗಳಿಗೆ ಮತ್ತಷ್ಟು ನೋವು ತಂದಿದೆ.