Select Your Language

Notifications

webdunia
webdunia
webdunia
webdunia

ಒಂದೇ ಯೋಜನೆಯಲ್ಲಿ 5 ಮಂದಿ ಲಾಭ ಪಡೆಯಲು ವೊಡಾಫೋನ್ ನ ಈ ಪ್ಯಾಕ್ ನ್ನು ರಿಚಾರ್ಜ್ ಮಾಡಿ

ಒಂದೇ ಯೋಜನೆಯಲ್ಲಿ 5 ಮಂದಿ ಲಾಭ ಪಡೆಯಲು ವೊಡಾಫೋನ್ ನ ಈ ಪ್ಯಾಕ್ ನ್ನು ರಿಚಾರ್ಜ್ ಮಾಡಿ
ನವದೆಹಲಿ , ಶನಿವಾರ, 8 ಜೂನ್ 2019 (07:29 IST)
ನವದೆಹಲಿ : ಕುಟುಂಬದ ಸದಸ್ಯರೆಲ್ಲರೂ ಒಂದೇ ಯೋಜನೆಯನ್ನು ಹೊಂದಲು ಇಚ್ಚಿಸುವ ಗ್ರಾಹಕರಿಗಾಗಿ ವೊಡಾಫೋನ್ ಹೊಸ ಪ್ಯಾಮಿಲಿ ಪ್ಯಾಕ್ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.




ಈ ಯೋಜನೆಯಲ್ಲಿ ಒಬ್ಬ ಗ್ರಾಹಕ 999 ರೂಪಾಯಿ ರಿಚಾರ್ಜ್ ಮಾಡಿದರೆ ಅದರ ಸೌಲಭ್ಯವನ್ನು ಐದು ಮಂದಿ ಪಡೆಯಬಹುದು. ಆಗ ರೂ. 999ರ ಈ ಪ್ಲಾನ್ ಅನ್ನು ವಿಂಗಡಿಸಿದರೆ ಒಬ್ಬರಿಗೆ ರೂ. 200 ಖರ್ಚು ಮಾಡಿದಂತಾಗುತ್ತದೆ. ಮೂಲ ನಂಬರ್ ಗೆ ಗ್ರಾಹಕರು ಅನಿಯಮಿತ ಕರೆ ಜೊತೆ ಪ್ರತಿ ತಿಂಗಳು 80 ಜಿಬಿ ಡೇಟಾ ಸೌಲಭ್ಯ ಪಡೆಯಬಹುದು. ಉಳಿದ ನಂಬರ್ ಗಳಿಗೆ ಪ್ರತಿ ತಿಂಗಳು 20 ಜಿಬಿ ಡೇಟಾ ಲಭ್ಯವಾಗಲಿದೆ. ಇದರಲ್ಲಿ ರೋಲ್ ಓವರ್ ಸೌಲಭ್ಯವಿದ್ದು, 200 ಜಿಬಿ ಡೇಟಾವರೆಗೆ ಪಡೆಯಬಹುದಾಗಿದೆ.


ಅದರ ಜೊತೆಗೆ ಗ್ರಾಹಕರು ಅಮೆಜಾನ್ ಪ್ರೈಂ ಸದಸ್ಯತ್ವವನ್ನು ಒಂದು ವರ್ಷಗಳ ಕಾಲ ಆನಂದಿಸಬಹುದು. ಕೆಲ ದಿನಗಳ ಹಿಂದಷ್ಟೆ ವೋಡಾಪೋನ್ ರೂ. 399 ಹಾಗೂ ರೂ. 499 ಪ್ಲಾನ್ ಜಾರಿಗೆ ತಂದಿತ್ತು. ವೊಡಾಫೋನ್ ಫ್ಲೇ ತನ್ನ ಸದಸ್ಯರಿಗೆ ZEE5, ಸೋನಿ LIV, ಶೆಮಾರು, ಹೋಯಿ ಚೋಯಿ, ಸನ್ NXT ಮತ್ತು ಆಲ್ಟ್ ಬಾಲಾಜಿ ಪ್ರೀಮಿಯಂ ಕಂಟೆಂಟ್ ಪಡೆಯಲು ಅವಕಾಶ ಒದಗಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನುಮುಂದೆ ಮಗು ಯಾಕೆ ಅಳುತ್ತಿದೆ ಎಂದು ಪಾಲಕರು ಕಂಗಲಾಗುವ ಅಗತ್ಯವಿಲ್ಲ. ಯಾಕೆ ಗೊತ್ತಾ?