ಒಂದೇ ಬಾರಿ ರಿಚಾರ್ಜ್ ಮಾಡಿ ವರ್ಷವಿಡಿ ಮಾತನಾಡಲು ಗ್ರಾಹಕರು ಏರ್ಟೆಲ್ ನ ಪ್ಲಾನ್ ನ್ನು ಆಯ್ಕೆ ಮಾಡಿ

ಗುರುವಾರ, 24 ಜನವರಿ 2019 (07:08 IST)
ನವದೆಹಲಿ : ಏರ್ಟೆಲ್ ತನ್ನ ಗ್ರಾಹಕರಿಗಾಗಿ ವರ್ಷದಲ್ಲಿ ಒಂದೇ ಬಾರಿ ರಿಚಾರ್ಜ್ ಮಾಡುವಂತಹ ಹೊಸ ವಾರ್ಷಿಕ ಪ್ಲಾನ್ ವೊಂದನ್ನು ಬಿಡುಗಡೆ ಮಾಡಿದೆ.


ಈ ಪ್ಲಾನ್ ನಲ್ಲಿ ಗ್ರಾಹಕರು ವರ್ಷದಲ್ಲಿ ಒಂದೇ ಬಾರಿ 1699ರೂ. ರಿಚಾರ್ಜ್ ಮಾಡಿದರೆ ಅನಿಯಮಿತ ಸ್ಥಳೀಯ ಹಾಗೂ ರಾಷ್ಟ್ರೀಯ ಕರೆಯ ಲಾಭ ಪಡೆಯಬಹುದು. ಇದರ ಜೊತೆಗೆ ನಿಮಗೆ ಪ್ರತಿ ದಿನ 1 ಜಿಬಿ ಡೇಟಾ ಮತ್ತು 100 ಎಸ್ ಎಂಎಸ್ ಸಿಗಲಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಗ್ರಾಹಕರು ಏರ್ಟೆಲ್ ಆಪ್ ಮೂಲಕ ಪ್ರೀಮಿಯಂ ವಿಷಯವನ್ನು ಬಳಕೆ ಮಾಡಬಹುದು.


ಸದ್ಯ ಈ ಪ್ಲಾನ್ ಹಿಮಾಚಲ ಪ್ರದೇಶದ ಗ್ರಾಹಕರಿಗೆ ಮಾತ್ರ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ಈ ಯೋಜನೆ ವಿಸ್ತರಣೆಯಾಗಲಿದೆ. ಏರ್ಟೆಲ್ ಜೊತೆ ವೋಡಾಫೋನ್ ಹಾಗೂ ಬಿಎಸ್‌ಎನ್‌ಎಲ್ ಕೂಡ ವಾರ್ಷಿಕ ಯೋಜನೆ ಶುರು ಮಾಡಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಕ್ಸಾಂ ವೇಳೆ ಉತ್ತರ ಪತ್ರಿಕೆ ತೋರಿಸಲಿಲ್ಲವೆಂದ ಸಹಪಾಠಿ ಮೇಲೆ ವಿದ್ಯಾರ್ಥಿ ಎಸಗಿದ್ದಾನೆ ಇಂತಹ ಘೋರ ಕೃತ್ಯ