ವೋಡಾಫೋನ್ ನೀಡ್ತಿದೆ 159 ರೂಪಾಯಿಯ ಹೊಸ ಪ್ಲಾನ್

ಮಂಗಳವಾರ, 4 ಡಿಸೆಂಬರ್ 2018 (09:35 IST)
ಬೆಂಗಳೂರು : ಏರ್ಟೆಲ್ ಹಾಗೂ ಜಿಯೋದ 149 ರೂಪಾಯಿ ಪ್ಲಾನ್ ಗೆ ಟಕ್ಕರ್ ನೀಡಲು ವೋಡಾಫೋನ್ 159 ರೂಪಾಯಿಯ ಹೊಸ  ಪ್ಲಾನ್ ವೊಂದನ್ನು ಶುರು ಮಾಡಿದೆ.


ವೋಡಾಫೋನ್ ಹಾಗೂ ಐಡಿಯಾ ಎರಡು ಕಂಪನಿಗಳು ಒಂದಾಗಿ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ಲಾನ್ ಜಾರಿಗೆ ತರುತ್ತಿದೆ, ಅದರಂತೆ ಇದೀಗ 159 ರೂಪಾಯಿ ಪ್ಲಾನ್ ಶುರು ಮಾಡಿದ್ದು, ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಇದರಲ್ಲಿ ಗ್ರಾಹಕರಿಗೆ ಪ್ರತಿದಿನ 1 ಜಿಬಿ ಡೇಟಾ ಲಭ್ಯವಾಗಲಿದೆ. ಅಂದರೆ 28 ದಿನಗಳಲ್ಲಿ ಗ್ರಾಹಕರಿಗೆ ಒಟ್ಟೂ 28 ಜಿಬಿ ಡೇಟಾ ಸಿಗಲಿದೆ. ಪ್ರತಿ ದಿನ 100 ಎಸ್ ಎಂ ಎಸ್ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಸಿಗುತಿದೆ. ಆದರೆ ವೋಡಾಫೋನ್ ಈ ಪ್ಲಾನ್ ಕೆಲ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ಆಪರೇಷನ್ ಕಮಲಕ್ಕೆ ಸಿಎಂ ಕುಮಾರಸ್ವಾಮಿ ಭರ್ಜರಿ ಪ್ರತಿತಂತ್ರ