ಎಲ್‌.ಐ.ಸಿ ಪಾಲಿಸಿ ಮಾಡಿಸಿ ಬೇಡ ಎನ್ನುವವರು ಅದನ್ನು ರದ್ದು ಮಾಡಬಹುದು. ಹೇಗೆ ಗೊತ್ತಾ?

ಗುರುವಾರ, 16 ಮೇ 2019 (06:49 IST)
ಬೆಂಗಳೂರು : ಎಲ್‌.ಐ.ಸಿ ಪಾಲಿಸಿ ಮಾಡಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಇದೀಗ ಭಾರತೀಯ ಜೀವವಿಮಾ ನಿಗಮ ಸಿಹಿಸುದ್ದಿಯೊಂದನ್ನು ನೀಡಿದೆ.
ಹೌದು. ಈಗಾಗಲೇ ವಿಮಾ ಪಾಲಿಸಿ ಮಾಡಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು ಪಾಲಿಸಿ ಬದಲಿಸುವ ಅಥವಾ ರದ್ದು ಮಾಡುವ ಅವಕಾಶ ಭಾರತೀಯ ಜೀವವಿಮಾ ನಿಗಮವು ನೀಡಿದೆ. ಅದಕ್ಕಾಗಿ ಎಲ್‌.ಐ.ಸಿ ಪಾಲಿಸಿದಾರರಿಗೆ ಫ್ರೀ ಲುಕ್ ಪಿರಿಯಡ್ ಎಂಬ ಆಯ್ಕೆಯನ್ನು ಜಾರಿಗೊಳಿಸಿದೆ. ಫ್ರೀ ಲುಕ್ ಪಿರಿಯಡ್ ನಿಯಮದಡಿಯಲ್ಲಿ ನಿಮ್ಮ ಪಾಲಿಸಿಯನ್ನು ರದ್ದಗೊಳಿಸಬಹುದು ಅಥವಾ ಬದಲಾಯಿಸಿಕೊಳ್ಳಬಹುದು. ಇದಕ್ಕಾಗಿ ಫ್ರೀ ಲುಕ್ ಪಿರಿಯಡ್ ಹೆಸರಿನಡಿಯಲ್ಲಿ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.


ಇಲ್ಲಿ ನೀವು ಪಾಲಿಸಿಗಾಗಿ ಕಟ್ಟಿದ ಸಂಪೂರ್ಣ ಪ್ರೀಮಿಯಂ ಹಣವನ್ನು ವಾಪಸ್ ಪಡೆದುಕೊಳ್ಳಬಹುದಾಗಿದೆ. ಇಲ್ಲದಿದ್ದರೆ ಬೇರೆ ಪಾಲಿಸಿ ಪ್ಲಾನ್ ಗೆ ಬದಲಾಯಿಸಿಕೊಳ್ಳಬಹುದಾಗಿದೆ. ನಿಮ್ಮ ಹತ್ತಿರದ ಎಲ್‌.ಐ.ಸಿ ಕಚೇರಿಗೆ ತೆರಳಿ ನಿಮ್ಮ ಪಾಲಿಸಿ ಬದಲಾಯಿಸಬಹುದು  ಇಲ್ಲವೇ ರದ್ದುಗೊಳಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಪ್ಪಲಿ ವಿಚಾರಕ್ಕೆ ವಿವಾದಕ್ಕೀಡಾದ ಅಮೆರಿಕಾ ಅಧ್ಯಕ್ಷರ ಪುತ್ರಿ