Select Your Language

Notifications

webdunia
webdunia
webdunia
webdunia

ಚಪ್ಪಲಿ ವಿಚಾರಕ್ಕೆ ವಿವಾದಕ್ಕೀಡಾದ ಅಮೆರಿಕಾ ಅಧ್ಯಕ್ಷರ ಪುತ್ರಿ

ಚಪ್ಪಲಿ ವಿಚಾರಕ್ಕೆ ವಿವಾದಕ್ಕೀಡಾದ ಅಮೆರಿಕಾ ಅಧ್ಯಕ್ಷರ ಪುತ್ರಿ
ಅಮೇರಿಕಾ , ಗುರುವಾರ, 16 ಮೇ 2019 (06:33 IST)
ಅಮೇರಿಕಾ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಾಗ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿಯಾಗುತ್ತಿದ್ದರು. ಆದರೆ ಈ ಬಾರಿ ಅವರ  ಪುತ್ರಿ ಇವಾಂಕ ಟ್ರಂಪ್‌ ಚಪ್ಪಲಿಯ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ.



ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ , ಕೆಲ ದಿನಗಳ ಹಿಂದೆ ಚೀನಾದಲ್ಲಿ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.25ರಷ್ಟು ಹೆಚ್ಚಿಸಿದ್ದರಿಂದ ಅಮೆರಿಕಾಗೆ ಅಗತ್ಯವಿರುವ ವಸ್ತುಗಳನ್ನು ಇಲ್ಲಿಯೇ ಉತ್ಪಾದಿಸಬೇಕು ಎನ್ನುವ ಮಾತನ್ನು ಹೇಳಿ ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕ ಟ್ರಂಪ್‌ ಮಾತ್ರ ಚೀನಾ ಉತ್ಪನ್ನಗಳನ್ನು ಬಳಸುವ ಫೋಟೋ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

 

ಇವಾಂಕ ಹೆಸರಿನ ಬಂದ ಕಾರ್ಟ್‌ ನಲ್ಲಿ ಚಪ್ಪಲಿ ಎಂದು ಬರೆದಿದ್ದು, ಅದರ ಕೆಳ ಭಾಗದಲ್ಲಿ ಮೇಡ್‌ ಇನ್‌ ಚೀನಾ ಎಂದು ಬರೆದಿದ್ದ ಫೋಟೋವೊಂದನ್ನು ಶ್ವೇತಾ ಭವನದ ಮಾಜಿ ಮುಖ್ಯ ಫೋಟೋಗ್ರಾಫರ್‌ ಪೆಟೆ ಸೋಝಾ ಬಿಡುಗಡೆಗೊಳಿಸಿದ್ದಾರೆ. ಇದೀಗ ಈ ಫೋಟೋ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಟ್ರಂಪ್‌ ಅವರ ದ್ವಿಮುಖ ನೀತಿಗೆ ಇದು ಸಾಕ್ಷಿ ಎಂದು ಅನೇಕರು ಟೀಕಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಗಾದಿಗೆ ಎಂಬಿಪಿ, ಡಿಕೆಶಿ ಹಾವು – ಮುಂಗುಸಿಯಂತೆ ಕಿತ್ತಾಟ?