ಬೆಂಗಳೂರು: ಸೆಪ್ಟೆಂಬರ್ ತಿಂಗಳೆಂದರೆ ಅನೇಕ ಹಬ್ಬಗಳು ಒಟ್ಟಿಗೇ ಬರುವ ತಿಂಗಳು. ಹೀಗಾಗಿ ಬ್ಯಾಂಕ್, ಕಚೇರಿಗಳಿಗೆ ಸಾಲು ಸಾಲು ರಜೆ ಇದ್ದೇ ಇರುತ್ತದೆ. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ಗಳಿಗಂತೂ ಅರ್ಧಕ್ಕರ್ಧವೂ ರಜೆಯೇ ಇರಲಿದೆ. ಇಲ್ಲಿದೆ ವಿವರ.
ಮುಂದಿನ ತಿಂಗಳು ಗಣೇಶ ಹಬ್ಬ, ಈದ್ ಮಿಲಾದ್, ಎರಡನೇ ಶನಿವಾರ ಎಂದೆಲ್ಲಾ ಹಲವು ರಜೆಗಳಿವೆ. ಕರ್ನಾಟಕದಲ್ಲಿ ಮುಂದಿನ ತಿಂಗಳು ಈಗಿನ ಲೆಕ್ಕಾಚಾರದ ಪ್ರಕಾರ 8 ದಿನ ರಜೆಯಾಗಿರಲಿದೆ. ಯಾವೆಲ್ಲಾ ಹಬ್ಬಕ್ಕೆ ಯಾವೆಲ್ಲಾ ದಿನ ರಜೆ ಇಲ್ಲಿದೆ ನೋಡಿ ವಿವರ.
ಸೆಪ್ಟೆಂಬರ್ 7: ವಿನಾಯಕ ಚತುರ್ಥಿ
ಸೆಪ್ಟೆಂಬರ್ 14: ಎರಡನೇ ಶನಿವಾರ ರಜೆ
ಸೆಪ್ಟೆಂಬರ್ 16: ಈದ್ ಮಿಲಾದ್ ರಜೆ
ಸೆಪ್ಟೆಂಬರ್ 28: ನಾಲ್ಕನೇ ಶನಿವಾರ ರಜೆ
ಇವಿಷ್ಟು ಸರ್ಕಾರೀ ರಜೆಯಾದರೆ ಒಟ್ಟು ನಾಲ್ಕು ಭಾನುವಾರ ರಜೆ ಪ್ರತ್ಯೇಕವಾಗಿದೆ. ವಿಶೇಷವೆಂದರೆ ಈ ಬಾರಿ ಹೆಚ್ಚಿನ ಹಬ್ಬಗಳು ಶನಿವಾರ ಅಥವಾ ಸೋಮವಾರ ಎಂಬಂತೆ ವೀಕೆಂಡ್ ನಲ್ಲೇ ಬರುತ್ತಿದ್ದು ಊರುಗಳಿಗೆ ತೆರಳುವವರಿಗೆ ಫ್ಯಾಮಿಲಿ ಸಮೇತ ಟ್ರಿಪ್ ಮಾಡುವುದಿದ್ದರೆ ತಕ್ಕ ಸಂದರ್ಭ ಸಿಗಲಿದೆ.
ಮುಂದಿನ ತಿಂಗಳು ಬ್ಯಾಂಕ್ ಗೆ ಇಷ್ಟೊಂದು ರಜೆಯಿರುವುದರಿಂದ ಸಹಜವಾಗಿ ಮಾರುದ್ದದ ಕ್ಯೂ ಕಂಡುಬರಬಹುದು. ಈ ರಜೆಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನಿಟ್ಟುಕೊಂಡರೆ ಸೂಕ್ತ.