ನವದೆಹಲಿ : ಈ ಹಿಂದೆ ಬಿಡುಗಡೆಗೊಂಡು ನಂತರ ಹಿಂಪಡೆದ ಪತಂಜಲಿ ಸಮೂಹದ ಕಿಂಭೋ ಸಂವಹನ ಆ್ಯಪ್ ಅನ್ನು ಇದೇ ಆಗಸ್ಟ್ 27ರಂದು ಅಧಿಕೃತವಾಗಿ ಮತ್ತೆ ಬಿಡುಗಡೆಯಾಗಲಿರುವುದಾಗಿ ಪತಂಜಲಿ ಸಮೂಹದ ಕಾರ್ಯಾನಿರ್ವಹಕ ನಿರ್ದೇಶಕ ಅಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ.
ಸುಮಾರು 2 ತಿಂಗಳ ಹಿಂದೆ ಕಿಂಭೋ ಆಪ್ ನ್ನು ಪ್ಲೇಸ್ಟೋರ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಗೊಂಡ ಮೊದಲ 3 ಗಂಟೆಗಳಲ್ಲೇ 1.5 ಲಕ್ಷಕ್ಕೂ ಅಧಿಕ ಜನರು ಈ ಆ್ಯಪನ್ನು ಡೌನ್ ಲೋಡ್ ಮಾಡಿಕೊಂಡಿದ್ದರು. ಆದರೆ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ 12 ಗಂಟೆಗಳ ನಂತರ ಈ ಆಪ್ ನ್ನು ಹಿಂಪಡೆಯಲಾಗಿತ್ತು.
ಈಗ ಎಲ್ಲ ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಲಾಗಿದ್ದು, ಅಧಿಕೃತ ಬಿಡುಗಡೆಗೆ ಸಿದ್ಧವಾಗಿದೆ. ಅಲ್ಲದೇ ವಾಟ್ಸ್ ಆಪ್ ಗೆ ದೇಶಿ ಆಪ್ ರೂಪಿಸಬೇಕು ಎಂಬ ಉದ್ದೇಶದಿಂದಲೇ ಐಟಿ ಜಗತ್ತಿಗೆ ಬರುತ್ತಿದ್ದೇವೆ ಎಂದು ಪತಂಜಲಿ ಹೇಳಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ