Select Your Language

Notifications

webdunia
webdunia
webdunia
webdunia

ಪ್ಲೇಸ್ಟೋರ್ ನಲ್ಲಿರುವ ಈ ಆ್ಯಪ್ ಗಳಲ್ಲಿದೆಯಂತೆ ಮಾಲ್ವೇರ್ ವೈರಸ್

ಪ್ಲೇಸ್ಟೋರ್ ನಲ್ಲಿರುವ ಈ ಆ್ಯಪ್ ಗಳಲ್ಲಿದೆಯಂತೆ ಮಾಲ್ವೇರ್ ವೈರಸ್
ನವದೆಹಲಿ , ಶುಕ್ರವಾರ, 18 ಅಕ್ಟೋಬರ್ 2019 (09:24 IST)
ನವದೆಹಲಿ :  ಗೂಗಲ್ ಪ್ಲೇಸ್ಟೋರ್ ನಲ್ಲಿರುವ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವ ಗ್ರಾಹಕರೇ ಎಚ್ಚರ. ಯಾಕೆಂದರೆ ಪ್ಲೇಸ್ಟೋರ್ಸ್ ನ ಕೆಲವು ಆ್ಯಪ್ ಗಳಲ್ಲಿ ಮಾಲ್ವೇರ್, ಸ್ಪೈವೇರ್ ನಂತಹ ಅಪಾಯಕಾರಿ ವೈರಸ್ ಇರುವುದು ಪತ್ತೆಯಾಗಿದೆ.




ಈ ಅಪ್ಲಿಕೇಶನ್ ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ ಅಂತ ಅನಿಸಿದ್ದರೂ ಇದರಲ್ಲಿ ಮಾಲ್ವೇರ್ ಇರುವುದರಿಂದ ಇದು ನಿಮ್ಮ ಆಂಡ್ರಾಯ್ಡ್ ಫೋನ್ ಗಳಿಗೆ ತುಂಬಾ ಹಾನಿಕಾರಕವಾಗಿದೆ. ಫೋಟೊ ಎಡಿಟಿಂಗ್ ಸಾಪ್ಟ್ ವೇರ್, ಗೇಮ್ಸ್ ಮತ್ತು ಫೋಟೊ ಗ್ಯಾಲರಿಯಂತಹ ಆ್ಯಪ್ ಗಳಲ್ಲಿ ಈ ವೈರಸ್ ಇರುವುದು ತಿಳಿದುಬಂದಿದೆ. ಅಲ್ಲದೆ ಕೆಲವು ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿದರೆ ಅದು ನಿಮಮ್ ವೈಯಕ್ತಿಕ ಹಾಗೂ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತದೆಯಂತೆ. 


ಇಂತಹ ಆ್ಯಪ್ ಗಳನ್ನು ಗೂಗಲ್ ತೆಗೆದುಹಾಕಿದರೂ ಕೂಡ ಮತ್ತೆ ಕೆಲವು ಸೇರಿಕೊಂಡಿವೆ ಎನ್ನಲಾಗಿದೆ. ಅವುಗಳು ಇಲ್ಲಿವೆ: ಮೋಟರ್ ರೋಡ್ 2ಡಿ, ಸೆಲ್ ಕ್ಯಾಮರಾ, ಪ್ಲೆಡ್ಜ್ ಕ್ಲೀನ್, ಮೆಂಟರ್ ಸೆಕ್ಯುರಿಟಿ, ಕಂಪೋಸ್ ಕ್ಯಾಮರಾ, ಡಿಸ್ಪ್ಲೇ ವಾಲ್ ಪೇಪರ್, ಗ್ರೀನ್ ಕ್ಯಾಮರಾ. ಮಾಹಿತಿ ಪ್ರಕಾರ ಮಿಲಿಯನಷ್ಟು ಗ್ರಾಹಕರು ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿದ್ದಾರೆ ಎನ್ನಲಾಗಿದೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಪುರೋಹಿತರಿಲ್ಲದೇ ನಡೆದ ಮದುವೆ! ವಧು ವರರು ಪ್ರಮಾಣ ಮಾಡಿದ್ದು ಯಾವುದರ ಮೇಲೆ ಗೊತ್ತಾ?!