Select Your Language

Notifications

webdunia
webdunia
webdunia
webdunia

ಎಲ್ಪಿಜಿ ಸಬ್ಸಿಡಿ ದರವನ್ನು ಶೇ. 60 ಹೆಚ್ಚಿಸಿದ ಕೇಂದ್ರ ಸರ್ಕಾರ

ಎಲ್ಪಿಜಿ ಸಬ್ಸಿಡಿ ದರವನ್ನು ಶೇ. 60 ಹೆಚ್ಚಿಸಿದ ಕೇಂದ್ರ ಸರ್ಕಾರ
ನವದೆಹಲಿ , ಶುಕ್ರವಾರ, 13 ಜುಲೈ 2018 (07:52 IST)
ನವದೆಹಲಿ : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ  ತೈಲ ದರ ಏರಿಕೆಯಾಗಿರುವ ಹಿನ್ನಲೆಯಲ್ಲಿ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್‌ನ ದರಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಪಿಜಿ ಸಬ್ಸಿಡಿ ದರವನ್ನು ಶೇ. 60 ಹೆಚ್ಚಿಸಿದೆ ಎಂದು ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರದಲ್ಲ ಹೆಚ್ಚಳವಾಗಿದ್ದರೂ ಗ್ರಾಹಕರ ಸಬ್ಸಿಡಿಯಲ್ಲಿ ಸರ್ಕಾರ ಹೆಚ್ಚಳ ಮಾಡಿದೆ. ಇದರಿಂದ ಗ್ರಾಹಕರು ನಿರಾಳರಾಗಿದ್ದಾರೆ ಎಂದು ಐಒಸಿ ಅಧ್ಯಕ್ಷ ಸಂಜೀವ್ ಸಿಂಗ್ ತಿಳಿಸಿದ್ದಾರೆ.

 

ಹಾಗೇ ಕಳೆದ ಮೇಯಲ್ಲಿ 159.29 ರೂ. ಇದ್ದ ಸಬ್ಸಿಡಿ ಜೂನ್ ತಿಂಗಳಲ್ಲಿ 204.95 ರೂ.ಗೆ ತಲುಪಿದ್ದು, ಈ ತಿಂಗಳ ಆರಂಭದಲ್ಲಿ 257.74 ರೂ.ಗೆ ತಲುಪಿದೆ. ಒಟ್ಟಾರೆಯಾಗಿ ಒಂದೂವರೆ ತಿಂಗಳ ಅವಧಿಯಲ್ಲಿ ಎಲ್ಪಿಜಿ ಸಬ್ಸಿಡಿ ದರದಲ್ಲಿ ಶೇ. 60 ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ಮಾರ್ಟ್‌ಫೋನ್ ಅನುಕೂಲ ಅನಾನುಕೂಲಗಳೆಷ್ಟು