Select Your Language

Notifications

webdunia
webdunia
webdunia
webdunia

ವಾಟ್ಸ್​ ಆ್ಯಪ್​ ನಲ್ಲಿ ಬಂದ ಸುದ್ದಿ ನಿಜವೋ?ಸುಳ್ಳೊ? ಎಂದು ತಿಳಿಯಲು ಹೀಗೆ ಮಾಡಿ

ವಾಟ್ಸ್​ ಆ್ಯಪ್​ ನಲ್ಲಿ ಬಂದ ಸುದ್ದಿ ನಿಜವೋ?ಸುಳ್ಳೊ? ಎಂದು ತಿಳಿಯಲು ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2019 (10:04 IST)
ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ವಿನಿಮಯವಾಗುತ್ತಿರುವುದರಿಂದ ಇದನ್ನು ತಪ್ಪಿಸಲು ಜನಪ್ರಿಯ ಮೆಸೇಜಿಂಗ್​ ತಾಣವಾದ ವಾಟ್ಸ್​ ಆ್ಯಪ್​ ಹೊಸ ತಂತ್ರವನ್ನು ರೂಪಿಸದೆ.

ಹೌದು. ವಾಟ್ಸ್​ ಆ್ಯಪ್​ ನಲ್ಲಿ ಬಂದ ಮಾಹಿತಿ ಸುಳ್ಳು ಅಥವಾ ಸತ್ಯವೇ ಎಂಬುದನ್ನು ತಿಳಿಯಲು ವಾಟ್ಸ್​ಆ್ಯಪ್​ ಸಂಸ್ಥೆ ‘ಫಾರ್ವಡ್​ ಮೆಸೇಜ್‘​ ಎಂಬ ಹೊಸ  ಫೀಚರ್ ​ ಅನ್ನು ಪರಿಚಯಿಸುತ್ತಿದೆ. ಇದರಲ್ಲಿ ಬಳಕೆದಾರರಿಗೆ ​ ‘ಫಾರ್ವಟೆಡ್​ ಇನ್ಫೋ‘ ಮತ್ತು ‘ಫ್ರೀಕ್ವೆಂಟ್ಲಿ ಫಾರ್ವಡೆಡ್‘​ ಎಂಬ ಎರಡು ರೀತಿಯ ಹೊಸ ಆಯ್ಕೆಯನ್ನು ನೀಡುತ್ತಿದೆ.

 

ಈ ಫೀಚರ್​​​​ನಲ್ಲಿ​ ನಾವು ಕಳುಹಿಸಲಾದ ಸಂದೇಶ ಎಷ್ಟು ಬಾರಿ ಫಾರ್ವಡ್​ ಆಗಿದೆ ಎಂಬ ಮಾಹಿತಿ ನಮಗೆ ತಿಳಿಯುವುದಿಲ್ಲ. ಆದರೆ ನಾವು ಫಾರ್ವಡ್ ಮಾಡಿದ ಸ್ನೇಹಿತರಿಗೆ ಈ ಮಾಹಿತಿ ತಿಳಿಯುತ್ತದೆ. ಇದನ್ನು ಫಾರ್ವಟೆಡ್​ ಇನ್ಫೋ‘ ದಿಂದ ತಿಳಿಯಬಹುದು.

 

ವಾಟ್ಸ್​ ಆ್ಯಪ್​ ಬಳಕೆದಾರ ಕಳುಹಿಸಿದ ಸಂದೇಶ ನಾಲ್ಕಕ್ಕಿಂತ ಹೆಚ್ಚು ಬಾರಿ ಫಾರ್ವಡ್​ ಆದಲ್ಲಿ, ಫ್ರೀಕ್ವೆಂಟ್ಲಿ ಫಾರ್ವಡೆಡ್​ ಎಂಬ ಲೇಬಲ್​ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಜನಪ್ರಿಯ ಸಂದೇಶ ಯಾವುದೆಂದು ತಿಳಿಯಲು ಸಹಾಯಕವಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಲಿಂಗ ಕಾಮ, ವ್ಯಭಿಚಾರ ಮಾಡಿದವರಿಗೆ ಈ ದೇಶದಲ್ಲಿ ಕಲ್ಲುಹೊಡೆದು ಸಾಯಿಸುತ್ತಾರಂತೆ