Publish Date: Sat, 09 Mar 2019 (15:50 IST)
Updated Date: Sat, 09 Mar 2019 (16:03 IST)
ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ವಂಶ ರಾಜಕಾರಣದ ವಿರುದ್ಧ ಟೀಕೆಗಳು ಮುಂದುವರಿದಿವೆ.
ವ್ಯಂಗ್ಯವಾಗಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಕ್ರಿಕೆಟ್ ಟೀಮ್ ಫೋಟೋ ವೈರಲ್ ಮಾಡಿರುವ ನೆಟ್ಟಿಗರು ಗಮನ ಸೆಳೆದಿದ್ದಾರೆ.
ಇಂಡಿಯನ್ ಕ್ರಿಕೆಟ್ ಟೀಂ ಜೆರ್ಸಿಯಲ್ಲಿ ರಾರಾಜಿಸುತ್ತಿರುವ ದೇವೇಗೌಡರ ಕುಟುಂಬಸ್ಥರ ಫೋಟೋವನ್ನು ಹಾಕಲಾಗಿದೆ.
ದೊಡ್ಡಗೌಡರು ಇಂಡಿಯನ್ ಕ್ರಿಕೆಟ್ ಟೀಂನಲ್ಲಿದ್ದರೆ ಇಷ್ಟೊತ್ತಿಗೆ ಅವರ ಇಡೀ ಕುಟುಂಬವೇ ಕ್ರಿಕೆಟ್ ಟೀಂನಲ್ಲಿ ಇರ್ತಿತ್ತು ಎಂದು ವ್ಯಂಗ್ಯ ಮಾಡಲಾಗಿದೆ.
ಸುಮಲತಾ ಅಂಬರೀಷ್ ವಿರುದ್ಧ ಟೀಕೆಗೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸುಮಲತಾ ಅಂಬರೀಷ್ ಅವರನ್ನು ಅವಮಾನಿಸಿರುವುದರಿಂದ ಮಂಡ್ಯದಲ್ಲಿ ಜೆಡಿಎಸ್‌ಗೆ ಸೋಲು ಕಟ್ಟಿಟ್ಟಬುತ್ತಿ. ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡುವುದಿಲ್ಲ. ಪಕ್ಷಗಾಗಿ ದುಡಿದು ದುಡಿದು ಕಾರ್ಯಕರ್ತರೇ ಟಿಕೆಟ್ ತಗೋಬೇಕು ಎಂದು ಬರಹವಿರುವ ವಿವಿಧ ಫೋಟೋ ವೈರಲ್ ಆಗಿವೆ. ಮಂಡ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಸಾಮಾಜಿಕ ಜಾಲತಾಣದ ಫೈಟ್ ಯಾವ ಹಂತಕ್ಕೆ ತಲುಪಲಿದೆ ಎನ್ನೋ ಕುತೂಹಲ ಮೂಡಿಸಿದೆ.