Select Your Language

Notifications

webdunia
webdunia
webdunia
webdunia

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿದ್ದದ್ದೇನು ಗೊತ್ತಾ?

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿದ್ದದ್ದೇನು ಗೊತ್ತಾ?
ಚೀನಾ , ಬುಧವಾರ, 13 ಮಾರ್ಚ್ 2019 (10:30 IST)
ಚೀನಾ : ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಎಲ್ಲಾ ಅಗತ್ಯ ವಸ್ತುಗಳನ್ನು ಆನ್ ಲೈನ್ ನಲ್ಲಿ ತರಿಸಿಕೊಳ್ಳುತ್ತಿದ್ದಾರೆ. ಅದೇರೀತಿ ಆನ್ ಲೈನ್  ಮೋರೆ ಹೋದ ಮಹಿಳೆಯೊಬ್ಬಳು ಆನ್ ಲೈನ್  ನಿಂದ ಬಂದ ಆಹಾರವನ್ನು ಕಂಡು ದಂಗಾಗಿದ್ದಾಳೆ.

ಚೀನಾದ ಮಹಿಳೆಯೊಬ್ಬಳು ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಆನ್ ಲೈನ್ ನಲ್ಲಿ ಆಹಾರ ಆರ್ಡರ್ ಮಾಡದ್ದಾಳೆ. ಬಳಿಕ ಮನೆಗೆ ಬಂದ ಪಾರ್ಸಲ್ ನ ಓಪನ್ ಮಾಡಿ ತಿನ್ನಲು ಮುಂದಾದಾಗ ಅದರಲ್ಲಿರುವ ಜಿರಲೆಗಳನ್ನು ಕಂಡು ಒಮ್ಮೆ ಶಾಕ್ ಆಗಿದ್ದಾಳೆ.

 

ಹೌದು. ಆ ಆಹಾರದಲ್ಲಿ ಸಣ್ಣ ಸಣ್ಣ ಜಿರಲೆಗಳು ಕಂಡುಬಂದಿದ್ದು, ಮಹಿಳೆ ಹಾಗೂ ಸ್ನೇಹಿತರು ಸೇರಿ  ಒಂದೊಂದೆ ಜಿರಲೆಯನ್ನು ತೆಗೆದು ಪೇಪರ್ ಮೇಲಿಟ್ಟು ಲೆಕ್ಕ ಮಾಡಿದಾಗ 40 ಜಿರಲೆ ಸಿಕ್ಕಿದೆ. ಇದನ್ನು ಆಕೆ ವಿಡಿಯೋ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈ ಬಗ್ಗೆ ಮಹಿಳೆ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ ಜಿಯೋ