Publish Date: Wed, 13 Mar 2019 (07:11 IST)
Updated Date: Wed, 13 Mar 2019 (07:13 IST)
ನವದೆಹಲಿ : ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತಿ ದಿನ 1.5 ಜಿಬಿಯಿಂದ 4 ಜಿಬಿವರೆಗೆ ಡೇಟಾ ಸಿಗಲಿದ್ದು, ಬೇರೆ ಬೇರೆ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಅನ್ ಲಿಮಿಟೆಡ್ ಸ್ಥಳೀಯ ಹಾಗೂ ಎಸ್ಡಿಡಿ ಕರೆಗಳು ಸಿಗಲಿದೆ.
ಜಿಯೋದ 197 ರೂಪಾಯಿಯ ಹೊಸ ಪ್ಲಾನ್ ಕಾಂಬೋ ಪ್ಯಾಕ್ ಆಗಿದ್ದು, ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, 2ಜಿಬಿ ಡೇಟಾ ಲಭ್ಯವಿದೆ. ಅನಿಯಮಿತ ಕರೆ, 300 ಎಸ್.ಎಂ.ಎಸ್ ಸಿಗಲಿದೆ. ಹಾಗೇ ಇನ್ನೊಂದು ರೂ. 299 ಪ್ಲಾನ್ ನಲ್ಲಿ ನಿಮಗೆ 3ಜಿಬಿ ಡೇಟಾ ಸಿಗಲಿದೆ.
ಜೊತೆಗೆ ಬೂಸ್ಟರ್ ರೂಪದಲ್ಲಿ ಜಿಯೋ 11 ರೂಪಾಯಿಯ ಪ್ಲಾನ್ ಬಿಡುಗಡೆ ಮಾಡಿದ್ದು, ಈ ಪ್ಲಾನ್ ನಲ್ಲಿ 4ಜಿ ಡೇಟಾ 400 ಎಂಬಿ ಜೊತೆ 64 ಕೆಬಿಪಿಎಸ್ ಪೋಸ್ಟ್ FUP ವೇಗದಲ್ಲಿ ಸಿಗಲಿದೆಯಂತೆ. ಇನ್ನು ಜಿಯೋದ 149 ರೂಪಾಯಿ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದೆ. 64 ಕೆಬಿಪಿಎಸ್ ಜೊತೆ 4ಜಿಬಿ ಡೇಟಾ ಪ್ಯಾಕ್ ನಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.