Select Your Language

Notifications

webdunia
webdunia
webdunia
webdunia

ನಿಗದಿತ ಬ್ಯಾಲೆನ್ಸ್ ಇಲ್ಲದೆ ಎಟಿಎಂ ಕಾರ್ಡ್ ಬಳಸುವ ಎಸ್‌.ಬಿ.ಐ ಗ್ರಾಹಕರೇ ಎಚ್ಚರ

ನಿಗದಿತ ಬ್ಯಾಲೆನ್ಸ್ ಇಲ್ಲದೆ ಎಟಿಎಂ ಕಾರ್ಡ್ ಬಳಸುವ ಎಸ್‌.ಬಿ.ಐ  ಗ್ರಾಹಕರೇ ಎಚ್ಚರ
ನವದೆಹಲಿ , ಸೋಮವಾರ, 11 ಮಾರ್ಚ್ 2019 (06:53 IST)
ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌.ಬಿ.ಐ.) ತನ್ನ ಎಟಿಎಂ ಗ್ರಾಹಕರಿಗೆ ಎಚ್ಚರಿಕೆಯೊಂದನ್ನು ನೀಡಿದೆ.


ನಿಗದಿತ ಬ್ಯಾಲೆನ್ಸ್ ಇಲ್ಲದಿದ್ದರೂ ಕೆಲವು ಗ್ರಾಹಕರು ಎಟಿಎಂ ಕಾರ್ಡ್ ಬಳಸಿ ಅಥವಾ ಪಿಒಎಸ್‌ ನಲ್ಲಿ ವಹಿವಾಟು ನಡೆಸುತ್ತಿದ್ದು, ಅಂತವರಿಗೆ ಇನ್ನುಮುಂದೆ ದಂಡ ವಿಧಿಸಲಾಗುವುದು ಎಂಬುದಾಗಿ ತಿಳಿಸಿದೆ.


ಇತ್ತೀಚೆಗೆ ಖಾತೆದಾರ ವಿದ್ಯಾರ್ಥಿಯೊಬ್ಬ ತನ್ನ ಖಾತೆಯಿಂದ 300 ರೂ. ಕಟ್ ಆಗಿದೆ ಎಂದು ದೂರಿದ್ದ ಹಿನ್ನಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಎಸ್‌.ಬಿ.ಐ., ಕಾನೂನು ಪ್ರಕಾರವೇ ಹಣ ಕಡಿತಗೊಂಡಿದೆ. ನೀವು ಹಣವಿಲ್ಲದಿದ್ದರೂ ವಹಿವಾಟು ನಡೆಸಲು ಮುಂದಾಗಿದ್ದು, ಪ್ರತಿ ಟ್ರಾನ್ಸ್ಯಾಕ್ಷನ್‌ಗೂ 23.60 ರೂ. ಕಡಿತಗೊಂಡಿದೆ ಎಂದು ತಿಳಿಸಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಿರಲಿ ಎಂಬ ಕಾರಣಕ್ಕಾಗಿ ಎಸ್‌.ಬಿ.ಐ. ಈ ನಿಯಮವನ್ನು ಜಾರಿಗೆ ತಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೇವು ತರಲು ಗದ್ದೆಗೆ ಹೋದ ಬಾಲಕಿಯ ಮೇಲೆ ಅಟ್ಟಹಾಸ ಮೇರೆದ ಕಾಮುಕರು