Select Your Language

Notifications

webdunia
webdunia
webdunia
webdunia

ಈ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಅಪಾಯ ಖಂಡಿತ

ಈ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಅಪಾಯ ಖಂಡಿತ
ಬೆಂಗಳೂರು , ಬುಧವಾರ, 6 ಮಾರ್ಚ್ 2019 (06:10 IST)
ಬೆಂಗಳೂರು : ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಯಾಕೆಂದರೆ ಬೇಯಿಸಿದ ಆಹಾರದಲ್ಲಿ ಪೋಷಕಾಂಶಗಳು ನಾಶವಾಗುತ್ತದೆ ಎಂದು. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ನಮ್ಮ ಆರೋಗ್ಯ ಹಾಳುಗುತ್ತದೆ. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

*ಮೊಳಕೆ ಕಾಳು ಯಾವುದೇ ಇರಲಿ ಅದನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಒಂದು ಬ್ಯಾಕ್ಟೀರಿಯಾ ನಮ್ಮ ರೋಗನಿರೋಧಕ ಶಕ್ತಿಯನ್ನು ನಾಶಮಾಡುತ್ತದೆಯಂತೆ.

 

*ಟೊಮೆಟೊವನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಗ್ಲೈಕೋ ಆಲ್ಕಲೈಡ್ಸ್ ಹೊಟ್ಟೆ ಸೇರಿದಾಗ ಆ್ಯಸಿಡ್ ಆಗಿ ಪರಿವರ್ತನೆಯಾಗಿ ಅಸಿಡಿಟಿ ತೊಂದರೆಯಾಗುತ್ತದೆ.

 

* ಹಸಿರು ಸೊಪ್ಪುಗಳನ್ನು ಕೂಡ ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಆಗ್ಸಾನಿಕ್ ಆ್ಯಸಿಡ್ ನಮ್ಮ ದೇಹದಲ್ಲಿರುವ ಐರಾನ್ ಹಾಗೂ ಕ್ಯಾಲ್ಸಿಯಂ ನನ್ನು ಕಡಿಮೆ ಮಾಡುತ್ತದೆ.

 

*ಹಣಬೆಯನ್ನು ಹಸಿಯಾಗಿ ತಿಂದರೆ ಅದರಲ್ಲಿರುವ  ಪ್ಯಾಸಿನೋಜಿನಿಕ್ ಎಂಬ ಅಂಶವಿರುತ್ತದೆ. ಇದು ಶರೀರಕ್ಕೆ ಸೇರಿದರೆ ವಿಷಪೂರಿತವಾಗುತ್ತದೆ.

 

 * ಹಸಿ ಹಾಲು ಕುಡಿಯಬಾರದು. ಇದರಲ್ಲಿರುವ ಬ್ಯಾಕ್ಟೀರಿಯಾ ಹೊಟ್ಟೆ ಸೇರಿದರೆ ವಾಂತಿ ಭೇದಿಯಾಗುತ್ತದೆ. ಹಾಗೇ ಹಸಿ ಮೊಟ್ಟೆಯನ್ನು ಕೂಡ ತಿನ್ನಬಾರದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸುವುದು ಹೇಗೆ ಗೊತ್ತಾ?