Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣದಿಂದ ಕಾಂಗ್ರೆಸ್ ಗೆ ಸೋಲು ಆಗೋಲ್ಲ

ಸಾಮಾಜಿಕ ಜಾಲತಾಣದಿಂದ ಕಾಂಗ್ರೆಸ್ ಗೆ ಸೋಲು ಆಗೋಲ್ಲ
ಯಾದಗಿರಿ , ಸೋಮವಾರ, 11 ಮಾರ್ಚ್ 2019 (15:24 IST)
ಸಾಮಾಜಿಕ ಜಾಲತಾಣದಿಂದ ಸೋಲುಂಟಾಗುತ್ತದೆ ಎಂದ್ರೆ ಯಾರು ಕೆಲಸ ಮಾಡಲ್ಲ. ಪಕ್ಷದ ತತ್ವ ,ಅಭಿವೃದ್ಧಿ ಕಾರ್ಯ ಮೆಚ್ಚಿ ಜನ ಬೆಂಬಲಿಸುತ್ತಾರೆ. ಕೇವಲ ಭಾಷಣದಿಂದ ಓಟು ಸಿಗುವದಿಲ್ಲ ಅಂತ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ಕೈ ಪಾಳೆಯದ ಹಿರಿಯ ಸಂಸದ ವಾಗ್ದಾಳಿ ನಡೆಸಿದ್ರು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ಮೋದಿ ಭಾಷಣದಿಂದ ಓಟು ಸಿಗುವದಿಲ್ಲ, ಸಮಾಜಿಕ ಜಾಲತಾಣ ನಾನು ಬಳಕೆ ಮಾಡುವದಿಲ್ಲ ಎಂದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗುತ್ತದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ನೂರು ಹೇಳಲಿ ತಿರ್ಮಾನ ತೆಗೆದುಕೊಳ್ಳುವರು ಮತದಾರರು. ಜನ ನಮ್ಮ ಪರವಾಗಿ ತಿರ್ಮಾನ ತೆಗೆದುಕೊಳ್ಳುತ್ತಾರೆ. ಅಲ್ಲಿತನಕ ಮುರಳಿಧರರಾವ್ ವೇಟ್  ಮಾಡಲಿ ಎಂದು ವ್ಯಂಗ್ಯವಾಡಿದರು. ಉಮೇಶ್ ಜಾಧವ್ ನಿಲ್ಲಲಿ, ಯಾರೇ ನಿಲ್ಲಲಿ ನಮ್ಮ ಹೋರಾಟ ತತ್ವದ ಮೇಲಿದೆ. ಜನರು ಇಷ್ಟ ಪಟ್ಟರೆ  ನನ್ನನ್ನು ಗೆಲ್ಲಿಸುತ್ತಾರೆ ಇಲ್ಲದಿದ್ದರೆ ಇಲ್ಲ ಎಂದು ಖರ್ಗೆ ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಲೋಕ ಚುನಾವಣೆ; ಬ್ಯಾನರ್, ಫ್ಲೆಕ್ಸ್ ಗೆ ಸಂಚಕಾರ