Publish Date: Mon, 11 Mar 2019 (14:58 IST)
Updated Date: Mon, 11 Mar 2019 (15:00 IST)
ಗರಿಗೇದರಿದ ಲೋಕಸಭಾ ಚುನಾವಣೆ ಕಣದಲ್ಲಿ ದಿನಕ್ಕೊಂದು ಕುತೂಹಲದ ವಿಷಯ ಹೊರಬೀಳುತ್ತಿದೆ.
ಕಾಂಗ್ರೆಸ್ ತೆಕ್ಕೆಗೆ ಮೈಸೂರು ಕೊಡಗು ಕ್ಷೇತ್ರ ಬೀಳುವ ಸಾಧ್ಯತೆ ದಟ್ಟವಾಗತೊಡಗಿದೆ. ಟಿಕೆಟ್ ಹಂಚಿಕೆಗಾಗಿ ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ.
ಮೈಸೂರು ಕೊಡಗು ಕ್ಷೇತ್ರಕ್ಕಾಗಿ ತೀವ್ರ ಒತ್ತಡ ಹಾಕುತ್ತಿರುವ ಸೂರಜ್ ಹೆಗ್ಡೆ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಸೂರಜ್ ಹೆಗ್ಡೆ, ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗರಾಗಿದ್ದಾರೆ. ದೆಹಲಿಯಲ್ಲೆ ಬೀಡುಬಿಟ್ಟ ಸೂರಜ್ ಹೆಗ್ಡೆ ಹಾಗೂ ಕಾಂಗ್ರೆಸ್ ಮುಖಂಡರ ನಡೆ ಕುತೂಹಲ ಕೆರಳಿಸಿದೆ. ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ನೀಡಲು ಒತ್ತಾಯ ಮಾಡಲಾಗುತ್ತಿದೆ. ತೀವ್ರ ಕುತೂಹಲ ಕೆರಳಿಸಿದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕ್ರಮ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.