Select Your Language

Notifications

webdunia
webdunia
webdunia
webdunia

ರೇವಣ್ಣ ಕಾಂಗ್ರೆಸ್ ವಿರೋಧಿ ಎಂದ ಕೇಂದ್ರ ಸಚಿವ

ರೇವಣ್ಣ ಕಾಂಗ್ರೆಸ್ ವಿರೋಧಿ ಎಂದ ಕೇಂದ್ರ ಸಚಿವ
ಬೆಂಗಳೂರು , ಶನಿವಾರ, 9 ಮಾರ್ಚ್ 2019 (16:00 IST)
ರೇವಣ್ಣ, ತಮ್ಮಣ್ಣ, ಇನ್ನು ಯಾವ ಅಣ್ಣ ಇದ್ದಾರೋ ಗೊತ್ತಿಲ್ಲ, ಇವರೆಲ್ಲಾ ಪರೋಕ್ಷವಾಗಿ ಕಾಂಗ್ರೆಸ್ ನ ವಿರೋಧಿಗಳಾಗಿರುವಂತಹದ್ದು ನಮಗೆ ಖುಷಿ ತಂದಿದೆ. ಹೀಗಂತ ಕೇಂದ್ರ ಸಚಿವ ಹೇಳಿಕೊಂಡಿದ್ದಾರೆ.

ಸುಮಲತಾ ಅಂಬರೀಶ್ ಬಗ್ಗೆ ಸಚಿವ ರೇವಣ್ಣ ಹೇಳಿಕೆ ನೀಡಿರುವ ವಿಚಾರ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಹೆಣ್ಣುಮಕ್ಕಳಿಗೆ, ತಾಯಂದಿರಿಗೆ ವಿಶೇಷ ಗೌರವ ಇದೆ. ಇಂತಹ ನೆಲದಲ್ಲಿ ಈ ರೀತಿಯ ಅವಹೇಳನದ ಮಾತು ಸರಿಯಲ್ಲ. ಹುಚ್ಚುತನದಲ್ಲಿ ಕೂಡಾ ಒಂದು ರೀತಿ ಇರಬೇಕು, ಆದರೆ ಅವರಲ್ಲಿ ಅದೂ ಕೂಡಾ ಇಲ್ಲ ಎಂದು ಟೀಕೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿಕೆ ನೀಡಿದ್ದು, ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಈವರೆಗೆ ಅಂತಹ ಬೆಳವಣಿಗೆ ಯಾವುದೂ ನಡೆದಿಲ್ಲ ಅಂತ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡ್ರ ಕುಟುಂಬವನ್ನು ಟೀಕೆ ಮಾಡ್ತಿರೋದು ಹೇಗೆ? ದೇವೇಗೌಡ್ರ ಕುಟುಂಬವನ್ನು ಟೀಕೆ ಮಾಡ್ತಿರೋದು ಹೇಗೆ?