Webdunia - Bharat's app for daily news and videos

Install App

Gold Price: 2000 ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು, ಈಗ ಎಷ್ಟಾಗಿದೆ ನೋಡಿ

Krishnaveni K
ಗುರುವಾರ, 20 ಮಾರ್ಚ್ 2025 (10:11 IST)
Photo Credit: X
ಬೆಂಗಳೂರು: ದೇಶದಲ್ಲಿ ಈಗ ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ 1 ಲಕ್ಷ ರೂ. ಗೆ ಬಂದು ತಲುಪುವ ಎಲ್ಲಾ ಸಾಧ್ಯತೆಗಳಿವೆ. ಕೇವಲ 25 ವರ್ಷಗಳ ಹಿಂದೆ ಅಂದರೆ 2000 ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ನೋಡಿ.

ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲಿನ ವ್ಯಾಮೋಹ ವಿಶೇಷವಾಗಿದೆ. ಯಾವುದೇ ಮದುವೆ, ಮುಂಜಿ ಕಾರ್ಯಕ್ರಮಗಳಿಗೆ ಚಿನ್ನದ ಆಭರಣಗಳನ್ನು ತೊಟ್ಟುಕೊಂಡು ಓಡಾಡುವುದು ಎಂದರೆ ಅದೇನೋ ಖುಷಿ. ಆದರೆ ಈಗ ಮಧ್ಯಮ ವರ್ಗದವರಿಗಂತೂ ಚಿನ್ನದ ಬೆಲೆ ಕೇಳಿದರೇ ಶಾಕ್ ಆಗುವ ಪರಿಸ್ಥಿತಿಯಿದೆ.

ಈಗ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 90 ಸಾವಿರ ಗಡಿ ದಾಟಿದೆ. ಆದರೆ 25 ವರ್ಷಗಳ ಹಿಂದೆ ಅಂದರೆ 2000 ರಲ್ಲಿ ಇದೇ  24 ಕ್ಯಾರೆಟ್ ಚಿನ್ನದ ಬೆಲೆಯಿದ್ದಿದ್ದು ಕೇವಲ 4,400 ರೂ.ಗಳು ಮಾತ್ರ. 2010 ರಲ್ಲಿ ಇದೇ ಚಿನ್ನದ ಬೆಲೆ 26,400 ರೂ.ಗೆ ಏರಿಕೆಯಾಗಿತ್ತು. ಅಷ್ಟೇ ಏಕೆ 2020 ರಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48 ಸಾವಿರ ರೂ.ಗಳಷ್ಟಿತ್ತು.

ಆದರೆ ಈಗ ಕೇವಲ ಐದೇ ವರ್ಷಗಳಲ್ಲಿ ದುಪ್ಪಟ್ಟು ಬೆಲೆಗೆ ಬಂದು ನಿಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟಗೆ ಅನುಗುಣವಾಗಿ ಚಿನ್ನದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದು ಇದೇ ರೀತಿ ಮುಂದುವರಿದರೆ ಚಿನ್ನದ ಬೆಲೆ ವಜ್ರವನ್ನೂ ಮೀರಿಸಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments