Select Your Language

Notifications

webdunia
webdunia
webdunia
webdunia

ಜಾಗತಿಕವಾಗಿ ಹೆಚ್ಚಿದ ಬೇಡಿಕೆ: ಏರುತ್ತಲೇ ಇದೆ ಚಿನ್ನ, ಬೆಳ್ಳಿ ಬೆಲೆ

ಜಾಗತಿಕವಾಗಿ ಹೆಚ್ಚಿದ ಬೇಡಿಕೆ: ಏರುತ್ತಲೇ ಇದೆ ಚಿನ್ನ, ಬೆಳ್ಳಿ ಬೆಲೆ

Sampriya

ನವದೆಹಲಿ , ಸೋಮವಾರ, 1 ಏಪ್ರಿಲ್ 2024 (19:02 IST)
Photo Courtesy X
ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೇ ಏರಿಕೆಯಾಗಿದ್ದು, ಖರೀದುದಾರರಿಗೆ  ಬಿಗ್ ಶಾಕ್ ನೀಡಿದೆ.

ಹೌದು ಜಾಗತಿಕವಾಗಿ ಚಿನ್ನದ ಮೇಲೆ ಬೇಡಿಕೆ ಹೆಚ್ಚಾದ ಹಿನ್ನೆಲೆ 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂ ಬೆಲೆ ₹1,070ರಷ್ಟು ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ₹68,420ಕ್ಕೆ ಸೋಮವಾರ ಮಾರಾಟವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಿಂದಿನ ಮಾರಾಟದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹67,350ರಷ್ಟು ದಾಖಲಾಗಿತ್ತು. ಏಕಕಾಲದಲ್ಲೇ ಇಷ್ಟೊಂದು ಏರಿಕೆಯಾಗಿರುವುದು ಚಿನ್ನ ಖರೀದುದಾರರಿಗೆ ದೊಡ್ಡ ಪೆಟ್ಟು ಬಿದ್ದಿದೆ.

ಇನ್ನೂ ಚಿನ್ನ ಮಾತ್ರವಲ್ಲದೆ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದೆ. ಪ್ರತಿ ಕೆ.ಜಿ.ಗೆ ₹1,120ರಷ್ಟು ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ಕೆ.ಜಿ. ಬೆಳ್ಳಿ ಬೆಲೆ ₹77,450ರಷ್ಟಿತ್ತು. ಸೋಮವಾರ ಇದು ₹78,570ಕ್ಕೆ ಏರಿಕೆಯಾಗಿದೆ. ಈ ಮೂಲಕ ಯುಗಾದಿ ಹಬ್ಬದಂದು ಚಿನ್ನ ಖರೀದಿ ಮಾಡಲು ಪ್ಲಾನ್‌ ಮಾಡಿವರಿಗೆ ದೊಡ್ಡ ಶಾಕ್ ಕಾದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಭ್ಯರ್ಥಿ ಪಿ ಸಿ ಮೋಹನ್‌ ನಾಮಪತ್ರ ಸಲ್ಲಿಕೆಗೆ ಕೇಸರಿ ಪಡೆ ಸಾಥ್