Publish Date: Mon, 01 Apr 2024 (18:43 IST)
Updated Date: Mon, 01 Apr 2024 (18:47 IST)
ಬೆಂಗಳೂರು: ಲೋಕಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯದಲ್ಲಿ ಇದೀಗ ನಾಮಪತ್ರ ಸಲ್ಲಿಕೆ ಜೋರಾಗಿಯೇ ನಡೆಯುತ್ತಿದೆ.
ಇಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ ಸಿ ಮೋಹನ್ ಅವರು ನಾಮಪತ್ರ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರ‍್ಯಾಲಿ ನಡೆಸಿ, ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಬಿಜೆಪಿ ನಾಯಕರು ಮನವಿ ಮಾಡಿದರು.
ಇನ್ನೂ ಪಿ.ಸಿ.ಮೋಹನ್ ನಾಮಿನೇಷನ್‌ಗೆ ಕೇಸರಿ ದೊಡ್ಡ ಪಡೆ ಸಾಥ್ ನೀಡಿದ್ದು, ರ್ಯಾಲಿ ಉದ್ದಕ್ಕೂ ಮೋದಿ ಮತ್ತೊಮ್ಮೆ ಎಂಬ ಕೂಗು ಕೇಳಿತು.
ಈ ಸಂದರ್ಭದಲ್ಲಿ ಸಂಸದೀಯ ಮಂಡಳಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಶಾಸಕ ಸುರೇಶ್ ಕುಮಾರ್, ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಸಿ ಟಿ ರವಿ, ಅರವಿಂದ್ ಲಿಂಬಾವಳಿ, ತಾರಾ ಅನುರಾಧಾ, ಶೃತಿ, ಜೆಡಿಎಸ್ ಮುಖಂಡ ರಮೇಶ್ ಗೌಡ, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.