ಬೆಂಗಳೂರು: ವಾಟ್ಸ್‌ಆ್ಯಪ್ ಬಳಸುವ ನೂರಾರು ಕೋಟಿ ಗ್ರಾಹಕರಿಗೆ ಗುಡ್‌ನ್ಯೂಸ್. ಜನಪ್ರಿಯ ಮೆಟಾ ಒಡೆತನದ ವಾಟ್ಸ್‌ಆ್ಯಪ್‌ಸದ್ಯದಲ್ಲೇ ಸ್ಟೇಟಸ್ ಅವಧಿಯನ್ನ ಎರಡು ನಿಮಿಷಕ್ಕೆ ಏರಿಕೆ ಮಾಡಲಿದೆ.
ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರು ಬಳಸೋ ಮೆಸೇಜಿಂಗ್ ಆ್ಯಪ್ ವಾಟ್ಸ್‌ಆ್ಯಪ್ ಜನಪ್ರಿಯ ಅಪ್ಲಿಕೇಷನ್ ಕೂಡ ಹೌದು. ದಿನದಿಂದ ದಿನಕ್ಕೆ ಈ ಅಪ್ಲಿಕೇಷನ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಮೆಟಾ ಕಂಪನಿಯೂ ಅಪ್ಲಿಕೇಷನ್‌ನಲ್ಲೂ ಅಪ್‌ಡೇಟ್ ಮಾಡಿ ಗ್ರಾಹಕರನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ.
ಅಸಂಖ್ಯಾ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತರಲಿದೆ. ಅದರಂತೆ ಸ್ಟೇಟಸ್ ವಿಡಿಯೋ ಮಿತಿಯನ್ನು ಏರಿಕೆ ಮಾಡಲು ಹೊರಟಿದೆ. ಈ ಮೊದಲು 30 ಸೆಕೆಂಡ್‌ಗಳಿಗೆ ಸೀಮಿತವಾಗಿದ್ದ ವಿಡಿಯೊವನ್ನು ಕೆಲ ತಿಂಗಳ ಹಿಂದೆ 1 ನಿಮಿಷಕ್ಕೆ ಹೆಚ್ಚಿಸಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆವಾಗಿದೆ.
ಇದರಿಂದ ಪ್ರೇರಣೆಗೊಂಡಿರುವ ಕಂಪೆನಿಯು ಎರಡು ನಿಮಿಷಕ್ಕೆ ವಿಸ್ತರಿಸಲು ನಿರ್ಧರಿಸಿದೆ. ಇದು ಸದ್ಯದಲ್ಲೇ ಅನುಷ್ಠಾನವಾಗಲಿದ್ದು, ಗ್ರಾಹಕರು ಆಗ ದೀರ್ಘಾವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಆ್ಯಪ್ ಅಪ್ಡೇಟ್ ಮಾಡಿಕೊಂಡು ಅದನ್ನು ಬಳಸಬಹುದಾಗಿದೆ.