ಬೆಂಗಳೂರು: ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ವಿಪರೀತ ಎನಿಸುವಷ್ಟು ಏರಿಕೆಯಾಗುತ್ತಲೇ ಇತ್ತು. ಆದರೆ ನಿನ್ನೆ ಮತ್ತು ಇಂದು ಕೊಂಚವೇ ಇಳಿಕೆಯಾಗಿದೆ. ಹಾಗಿದ್ದರೂ ಗ್ರಾಹಕರು ನೆಮ್ಮದಿಯಾಗುವಷ್ಟೇನೂ ಇಳಿಕೆಯಾಗಿಲ್ಲ. ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಾಗಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಮೊನ್ನೆಯಂತೂ ಪರಿಶುದ್ಧ ಚಿನ್ನದ ಬೆಲೆ 94 ಸಾವಿರ ಗಡಿ ದಾಟಿ ದಾಖಲೆ ಮಾಡಿತ್ತು. ನಿನ್ನೆ ಮತ್ತು ಇಂದು ಪರಿಶುದ್ಧ ಚಿನ್ನದ ದರ ಕೊಂಚವೇ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ಬೆಲೆ 92, 350 ರೂ.ಗಳಷ್ಟಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 160 ರೂ. ಇಳಿಕೆಯಾಗಿದ್ದು 8,400 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 174 ರೂ. ಇಳಿಕೆಯಾಗಿದ್ದು ಇಂದು 9,164 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 131 ರೂ. ಇಳಿಕೆಯಾಗಿದ್ದು ಇಂದು ಗ್ರಾಂಗೆ 6,873 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರದಲ್ಲಿ ಇಂದು ಭಾರೀ ಇಳಿಕೆಯಾಗಿದೆ. ಇಂದು ಬೆಳ್ಳಿ ದರ ಪ್ರತೀ ಕೆಜಿಗೆ 4,000 ರೂ.ಗಳಷ್ಟು ಇಳಿಕೆಯಾಗಿದ್ದು 99,000 ರೂ.ಗಳಿಗೆ ಬಂದು ತಲುಪಿದೆ. ನಿನ್ನೆಯೂ ಬೆಳ್ಳಿ ದರ ಪ್ರತೀ ಕೆ.ಜಿ.ಗೆ 2000 ರೂ. ಇಳಿಕೆಯಾಗಿತ್ತು.