Daily Horoscope

Select Your Language

Notifications

webdunia
webdunia
webdunia
webdunia

Gold Price today: ಚಿನ್ನದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ, ಏಕಾಏಕಿ ಲಕ್ಷದ ಸನಿಹ ಬಂದ ಬೆಲೆ

Gold
ಬೆಂಗಳೂರು: ಚಿನ್ನದ ಬೆಲೆ ಇತ್ತೀಚೆಗಿನ ದಿನಗಳಲ್ಲಿ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಲೇ ಇದೆ. ಇಂದಂತೂ ಪರಿಶುದ್ಧ ಚಿನ್ನದ ಬೆಲೆ ಇದ್ದಕ್ಕಿದ್ದಂತೆ ಭಾರೀ ಏರಿಕೆಯಾಗಿದೆ. ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಾಗಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಏನೇ ಮಾಡಿದರೂ ಚಿನ್ನದ ದರ ಮಾತ್ರ ಇಳಿಕೆಯಾಗುತ್ತಲೇ ಇಲ್ಲ. ಇಂದಂತೂ ಬೆಲೆ ಕೇಳಿದ್ರೇ ಬೆಚ್ಚಿಬೀಳುವಂತಿದೆ. ನಿನ್ನೆ ಪರಿಶುದ್ಧ ಚಿನ್ನದ 92,420 ರೂ.ಗಳಷ್ಟಿತ್ತು. ಇಂದು ಏಕಾಏಕಿ 2 ಸಾವಿರ ರೂ. ಹೆಚ್ಚಾಗಿದೆ. ಇಂದು ಪರಿಶುದ್ಧ ಚಿನ್ನದ ಬೆಲೆ 94,155 ರೂ.ಗೆ ಏರಿಕೆಯಾಗಿ ದಾಖಲೆ ಮಾಡಿದೆ.

22 ಮತ್ತು 24 ಬೆಲೆ ನಿನ್ನೆಯಂತೆ ಯಥಾ ಸ್ಥಿತಿಯಲ್ಲಿದೆ. ಆದರೆ 18 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ ನಿನ್ನೆಯಷ್ಟೇ ಇದ್ದು 8,510 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆಯಂತೇ 9,284 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಮಾತ್ರ 124 ರೂ. ಏರಿಕೆಯಾಗಿದ್ದು ಇಂದು ಗ್ರಾಂಗೆ 6,839 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರದಲ್ಲಿ ನಿನ್ನೆ ಕೊಂಚ ಮಟ್ಟಿಗೆ ಇಳಿಕೆಯಾಗಿತ್ತು.  ಆದರೆ ಇಂದು ಪ್ರತೀ ಕೆ.ಜಿ.ಗೆ 1900 ರೂಗಳಷ್ಟು ಮತ್ತೆ ಏರಿಕೆಯಾಗಿದೆ. ಇಂದು 1,05,000 ರೂ.ಗಳಿಗೆ ಬಂದು ತಲುಪಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

Share this Story:

Follow Webdunia kannada

ಮುಂದಿನ ಸುದ್ದಿ

EPFO ಹಣವನ್ನು ಎಟಿಎಂ ಮೂಲಕ ವಿತ್ ಡ್ರಾ ಮಾಡುವುದು ಹೇಗೆ ಇಲ್ಲಿದೆ ವಿವರ