ಬೆಂಗಳೂರು: ಪಿಎಫ್ ಹಣವನ್ನು ಎಟಿಎಂ ಮೂಲಕವೂ ವಿತ್ ಡ್ರಾ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವುದು ಹೇಗೆ ಇಲ್ಲಿದೆ ವಿವರ.
ಕೇಂದ್ರ ಸರ್ಕಾರ ಇಪಿಎಫ್ ಒ ಮೂಲಕ ಹಣ ಪಡೆಯುವ ಪ್ರಕ್ರಿಯೆಯನ್ನು ಈಗ ಸರಳೀಕೃತಗೊಳಿಸಿದೆ. ಮುಂಗಡ ಹಣವನ್ನು ಪಡೆಯುವ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಮೊದಲು ಉದ್ಯೋಗಿಗಳು ಪಿಎಫ್ ಹಣ ಪಡೆಯಲು ಕಚೇರಿಗೆ ಅಲೆದಾಡಬೇಕಾಗಿತ್ತು.
ಆದರೆ ಈಗ ಎಟಿಎಂ ಮೂಲಕ ಮತ್ತು ಯುಪಿಐ ಮೂಲಕ ಹಣ ಪಡೆಯಲು ಅವಕಾಶ ನೀಡಲಾಗಿದೆ. ಜೂನ್ ನಿಂದ ಈ ನಿಯಮ ಜಾರಿಗೆ ಬರಲಿದೆ. ಇನ್ನು ಮುಂದೆ ಶಿಕ್ಷಣ, ಮದುವೆ, ವಿದ್ಯಾಭ್ಯಾಸ ಇತ್ಯಾದಿ ಉದ್ದೇಶಕ್ಕಾಗಿಯೂ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ.
ಎಟಿಎಂ ಮೂಲಕ ವಿತ್ ಡ್ರಾ ಹೇಗೆ
ಇಪಿಎಫ್ಒ ಪೋರ್ಟಲ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು
ನಿಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ಬಳಸಬೇಕು
ಪಿಎಫ್ ವಿತ್ ಡ್ರಾ ಆಯ್ಕೆ ಮಾಡಬೇಕು.
ಎಷ್ಟು ಹಣ ಬೇಕು ಎಂಬುದನ್ನು ನಮೂದಿಸಬೇಕು
ಒಟಿಪಿ ದೃಢೀಕರಿಸಿದರೆ ಹಣ ಸಿಗಲಿದೆ.
ಯುಪಿಐ ಮೂಲಕ ಪಡೆಯುವುದು ಹೇಗೆ
ಇಪಿಎಫ್ಒ ಪೋರ್ಟಲ್ ಅಥವಾ ಮೊಬೈಲ್ ಆಪ್ ಗೆ ಲಾಗಿನ್ ಆಗಿ
ವಿತ್ ಡ್ರಾ ಪಿಎಫ್ ಆಯ್ಕೆ ಕ್ಲಿಕ್ ಮಾಡಿ
ಮೊತ್ತವನ್ನು ನಮೂದಿಸಿ, ಯುಪಿಐ ಐಡಿ ಎಂಟರ್ ಮಾಡಿ.
ಒಟಿಪಿ ದೃಢೀಕರಿಸಿದರೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.