Publish Date: Mon, 15 Sep 2025 (11:22 IST)
Updated Date: Mon, 15 Sep 2025 (11:24 IST)
ಬೆಂಗಳೂರು: ಕಳೆದ ವಾರವಿಡೀ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗುತ್ತಲೇ ಇತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಕೊಂಚವೇ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಿದ್ದು ದಾಖಲೆಯ ಮಟ್ಟಕ್ಕೆ ತಲುಪಿದೆ. ಈಗಂತೂ ಮಧ್ಯಮ ವರ್ಗದವರಿಗೆ ಚಿನ್ನ ಕೊಳ್ಳುವುದು ಕನಸೇ ಎಂಬಂತಾಗಿದೆ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪವೇ ಇಳಿಕೆ ಕಂಡುಬಂದಿದೆ. ಹಾಗಿದ್ದರೂ ಪರಿಶುದ್ಧಚಿನ್ನದ ದರ ದಾಖಲೆಯ ಮಟ್ಟದಲ್ಲಿದೆ. ಪರಿಶುದ್ಧ ಚಿನ್ನದ ದರ ಮೊನ್ನೆ1,13.285.00 ರೂ.ಗಳಷ್ಟಿತ್ತು. ಆದರೆ ಇಂದು ಕೊಂಚ ಇಳಿಕೆ ಕಂಡಿದ್ದು, 1,13.200.00 ರೂ.ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ11 ರೂ.ಗಳಷ್ಟು ಇಳಿಕೆಯಾಗಿದ್ದು 11,106 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 10 ರೂ.ಗಳಷ್ಟು ಇಳಿಕೆಯಾಗಿದ್ದು 10,180 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು 8 ರೂ.ಗಳಷ್ಟು ಇಳಿಕೆಯಾಗಿದ್ದು 8,329 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಕಳೆದ ವಾರ ಭಾರೀ ಏರಿಕೆಯಾಗಿತ್ತು. ಆದರೆ ಇಂದು ವಾರದ ಆರಂಭದಲ್ಲಿ ಯಥಾ ಸ್ಥಿತಿಯಲ್ಲಿದ್ದು ಪ್ರತೀ ಕೆ.ಜಿ ಬೆಳ್ಳಿ ದರ 1,33,000 ರೂ. ಗಳಷ್ಟಿದೆ.