Publish Date: Thu, 11 Sep 2025 (10:53 IST)
Updated Date: Thu, 11 Sep 2025 (10:56 IST)
ಬೆಂಗಳೂರು: ಚಿನ್ನದ ಬೆಲೆ ಇಳಿಕೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಇಂದಂತೂ ಪರಿಶುದ್ಧ ಚಿನ್ನದ ಸರ್ವಕಾಲಿಕ ದಾಖಲೆ ಮಾಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಚಿನ್ನದ ದರ ಕೇಳಿದರೆ ಈಗ ಶಾಕ್ ಹೊಡೆಯುವಂತಹ ಪರಿಸ್ಥಿತಿ. ಮಧ್ಯಮ ವರ್ಗದವರಿಗಂತೂ ಚಿನ್ನ ಈಗ ಗಗನ ಕುಸುಮ. ಈಗ ಪರಿಶುದ್ಧಚಿನ್ನದ ದರ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತರೆ ಚಿನ್ನದ ದರ ನಿನ್ನೆ ಭಾರೀ ಏರಿಕೆಯಾಗಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡಿದೆ. ಪರಿಶುದ್ಧ ಚಿನ್ನದ ದರ ನಿನ್ನೆ1,12.830.00 ರೂ.ಗಳಷ್ಟಿತ್ತು. ಆದರೆ ಇಂದು ಕೊಂಚ ಏರಿಕೆ ಕಂಡಿದ್ದು, 1,13.055.00 ರೂ.ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 1 ರೂ.ಗಳಷ್ಟು ಏರಿಕೆಯಾಗಿದ್ದು 11,052 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 1 ರೂ.ಗಳಷ್ಟು ಏರಿಕೆಯಾಗಿದ್ದು 10,131 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ರೂ.ಗಳಷ್ಟು ಏರಿಕೆಯಾಗಿದ್ದು 8,289 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ವಾರದ ಆರಂಭದಲ್ಲೇ ಮತ್ತೆ ಏರಿಕೆಯಾಗಿತ್ತು. ಮೊನ್ನೆಯಂತೂ ಬರೋಬ್ಬರಿ 3,000 ರೂ.ಗಳಷ್ಟು ಏರಿಕೆಯಾಗಿತ್ತು. ಆದರೆ ಇಂದು ಪ್ರತೀ ಕೆ.ಜಿ ಬೆಳ್ಳಿ ದರ 100 ರೂ.ಗಳಷ್ಟು ಇಳಿಕೆಯಾಗಿದ್ದು 1,29,900 ರೂ. ಗಳಷ್ಟಿದೆ.