Publish Date: Fri, 12 Sep 2025 (10:46 IST)
Updated Date: Fri, 12 Sep 2025 (10:48 IST)
ಬೆಂಗಳೂರು: ಚಿನ್ನದ ಬೆಲೆ ಇಳಿಕೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಇಂದು ಪರಿಶುದ್ಧ ಚಿನ್ನದ ಕೊಂಚ ಇಳಿಕೆಯಾದರೂ ಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಚಿನ್ನದ ದರ ಕೇಳಿದರೆ ಈಗ ಶಾಕ್ ಹೊಡೆಯುವಂತಹ ಪರಿಸ್ಥಿತಿ. ಮಧ್ಯಮ ವರ್ಗದವರಿಗಂತೂ ಚಿನ್ನ ಈಗ ಗಗನ ಕುಸುಮ. ಈಗ ಪರಿಶುದ್ಧಚಿನ್ನದ ದರ ದಾಖಲೆಯ ಮಟ್ಟದಲ್ಲಿದೆ. ಇಂದು ಇತರೆ ಚಿನ್ನದ ದರ ಭಾರೀ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ1,13.055.00 ರೂ.ಗಳಷ್ಟಿತ್ತು. ಆದರೆ ಇಂದು ಕೊಂಚ ಇಳಿಕೆ ಕಂಡಿದ್ದು, 1,12.710.00 ರೂ.ಗಳಾಗಿದೆ.
ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 77.10 ರೂ.ಗಳಷ್ಟು ಏರಿಕೆಯಾಗಿದ್ದು 11,128 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 70 ರೂ.ಗಳಷ್ಟು ಏರಿಕೆಯಾಗಿದ್ದು 10,200 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು 58 ರೂ.ಗಳಷ್ಟು ಏರಿಕೆಯಾಗಿದ್ದು 8,346 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ನಿನ್ನೆ ಇಳಿಕೆಯಾಗಿತ್ತು. ಆದರೆ ಇಂದು ಬರೋಬ್ಬರಿ 2,900 ರೂ.ಗಳಷ್ಟು ಏರಿಕೆಯಾಗಿದೆ. ಇಂದು ಪ್ರತೀ ಕೆ.ಜಿ ಬೆಳ್ಳಿ ದರ 1,32,000 ರೂ. ಗಳಷ್ಟಿದೆ.