Select Your Language

Notifications

webdunia
webdunia
webdunia
webdunia

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

Gold

Krishnaveni K

ಬೆಂಗಳೂರು , ಬುಧವಾರ, 25 ಜೂನ್ 2025 (10:38 IST)
ಬೆಂಗಳೂರು: ದಾಖಲೆಯ ಬೆಲೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಭಾರೀ ಇಳಿಕೆಯಾಗಿದ್ದು, ಗ್ರಾಹಕರು ಸಂತಸಪಡುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕದನ ವಾತಾವರಣ ಕೊಂಚ ತಿಳಿಯಾಗುತ್ತಿದ್ದಂತೇ ಇತ್ತ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಪರಿಶುದ್ಧ ಚಿನ್ನದ ದರ ಸದ್ಯಕ್ಕೆ ಇಳಿಕೆಯಾಗಲ್ವೆನೋ ಎಂಬಂತಹ ಪರಿಸ್ಥಿತಿಯಿತ್ತು. ಕಳೆದ ವಾರದಿಂದ ಲಕ್ಷ ಮೀರಿರುವ ಪರಿಶುದ್ಧ ಚಿನ್ನದ ಬೆಲೆ ಈಗಲೂ ಲಕ್ಷದ ಮೇಲೆಯೇ ಇದೆ. ಆದರೆ ಇಂದು ಭಾರೀ ಇಳಿಕೆಯಾಗಿದೆ.  ನಿನ್ನೆ ಪರಿಶುದ್ಧ ಚಿನ್ನದ ದರ 1,02, 080.00 ರೂ.ಗಳಷ್ಟಿತ್ತು. ಇಂದು ಪರಿಶುದ್ಧದ ಚಿನ್ನದ ದರ ಇಳಿಕೆಯಾಗಿದ್ದು 1,00,385.00 ರೂ. ಗಳಾಗಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 27 ರೂ. ಇಳಿಕೆಯಾಗಿದ್ದು 09,895 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 25 ರೂ. ಏರಿಕೆಯಾಗಿದ್ದು 9,070 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 21 ರೂ. ಇಳಿಕೆಯಾಗಿದ್ದು 7,421 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕಳೆದ ಕೆಲವು ದಿನಗಳಿಂದ ದಾಖಲೆಯ ಬೆಲೆ ಏರಿಕೆಯಾಗಿತ್ತು. ನಿನ್ನೆಯಿಂದ ಬೆಳ್ಳಿ ದರವೂ ಇಳಿಕೆಯತ್ತ ಸಾಗಿದೆ. ಇಂದು ಮತ್ತೆ 1,000 ರೂ.ಗಳಷ್ಟು ಇಳಿಕೆಯಾಗಿದೆ.  ಇಂದು ಬೆಳ್ಳಿ ದರ ಪ್ರತೀ ಕೆ.ಜಿ.ಗೆ  1,08, 000 ರೂ. ಗಳಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ ರಘುವಂಶಿಯನ್ನು ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ದೊಡ್ಡ ಮುನ್ನಡೆ