Daily Horoscope

Select Your Language

Notifications

webdunia
webdunia
webdunia
webdunia

Gold Price: ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್, ಇಂದಿನ ಬೆಲೆ ಎಷ್ಟು ನೋಡಿ

Gold
ಬೆಂಗಳೂರು: ದಾಖಲೆಯ ಬೆಲೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೊಮ್ಮೆ ಇಳಿಕೆಯಾಗಿದ್ದು ಗ್ರಾಹಕರಿಗೆ ಕೊಂಚ ನೆಮ್ಮದಿ ತರುವಂತಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಚಿನ್ನದ ಬೆಲೆ ಕಳೆದ ಒಂದು ವಾರದಿಂದ ಲಕ್ಷವನ್ನು ಮೀರಿ ನಿಂತಿದೆ. ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಮತ್ತೆ ಭಾರೀ ಏರಿಕೆಯಾಗಿ ಗ್ರಾಹಕರ ಚಿಂತೆ ಹೆಚ್ಚಿಸಿತ್ತು. ಆದರೆ ನಿನ್ನೆ ಮತ್ತು ಇಂದು ಕೊಂಚವೇ ಎನ್ನುವಷ್ಟು ಚಿನ್ನದ ದರ ಇಳಿಕೆಯಾಗಿದೆ.  ನಿನ್ನೆ ಪರಿಶುದ್ಧ ಚಿನ್ನದ ದರ 1,02, 080.00 ರೂ.ಗಳಷ್ಟಿತ್ತು. ಇಂದು ಪರಿಶುದ್ಧದ ಚಿನ್ನದ ದರ ಯಥಾಸ್ಥಿತಿಯಲ್ಲಿದ್ದು 1,02, 080.00 ರೂ.ಗಳಷ್ಟೇ ಇದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 82 ರೂ. ಇಳಿಕೆಯಾಗಿದ್ದು 09,087 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 75 ರೂ. ಏರಿಕೆಯಾಗಿದ್ದು 9,155 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 61 ರೂ. ಇಳಿಕೆಯಾಗಿದ್ದು 7,491 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕಳೆದ ಕೆಲವು ದಿನಗಳಿಂದ ದಾಖಲೆಯ ಬೆಲೆ ಏರಿಕೆಯಾಗಿತ್ತು. ಆದರೆ ಇಂದು 1,000 ರೂ.ಗಳಷ್ಟು ಇಳಿಕೆಯಾಗಿದೆ.  ಇಂದು ಬೆಳ್ಳಿ ದರ ಪ್ರತೀ ಕೆ.ಜಿ.ಗೆ  1,09, 000 ರೂ. ಗಳಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುರ್ತು ಪರಿಸ್ಥಿತಿಯ ಕರಾಳ ದಿನಗಳ ಸಂಬಂಧ ಅಭಿಯಾನ: ಸಿ.ಟಿ.ರವಿ