ಬೆಂಗಳೂರು: ಚಿನ್ನದ ಬೆಲೆ ಇತ್ತೀಚೆಗಿನ ದಿನಗಳಲ್ಲಿ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಲೇ ಇದೆ. ಇದೀಗ ಪರಿಶುದ್ಧ ಚಿನ್ನ ಖರೀದಿ ಮಾಡುವುದು ಮಧ್ಯಮ ವರ್ಗದವರಿಗೆ ಕನಸೇ ಸರಿ. ಹೀಗಿರುವಾಗ ಇಂದು ಕೊಂಚ ಇಳಿಕೆಯಾಗಿದ್ದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಾಗಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ಇನ್ನೇನು ಲಕ್ಷ ರೂ. ಗಡಿಗೆ ಬಂದು ನಿಲ್ಲುತ್ತದೆ ಎಂಬಂತಿತ್ತು. ಇದರ ನಡುವೆ ಪರಿಶುದ್ಧದ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಕೊಂಚ ಇಳಿಕೆಯಾಗಿದೆ. ಹಾಗಿದ್ದರೂ ಮಧ್ಯಮ ವರ್ಗದವರಿಗೆ ಈಗಲೂ ಕೈಗೆಟುಕದ ಕುಸುಮವೇ. ಇಂದು 99.9 ಶುದ್ಧದ ಚಿನ್ನದ ಬೆಲೆ 91,590 ರೂ.ಗೆ ಬಂದು ನಿಂತಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ತಕ್ಕ ಮಟ್ಟಿಗೆ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 25 ರೂ. ಇಳಿಕೆಯಾಗಿದ್ದು 8,285 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 28 ರೂ. ಇಳಿಕೆಯಾಗಿದ್ದು ಇಂದು 9,038 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 20 ರೂ. ಇಳಿಕೆಯಾಗಿದ್ದು ಇಂದು ಗ್ರಾಂಗೆ 6,779 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರದಲ್ಲಿ ನಿನ್ನೆ ಕೊಂಚ ಮಟ್ಟಿಗೆ ಏರಿಕೆಯಾಗಿತ್ತು. ಇದೀಗ ಬೆಳ್ಳಿ ಬೆಲೆಯೂ ಇಳಿಕೆಯಾಗುತ್ತಿದೆ. 1 ಲಕ್ಷ ರೂ. ದಾಟಿದ್ದ ಬೆಳ್ಳಿ ಬೆಲೆ ಈಗ ಪ್ರತೀ ಕೆ.ಜಿ.ಗೆ 94,000 ರೂ.ಗೆ ಬಂದು ತಲುಪಿದೆ.