'ನ್ಯಾಷನಲ್​​ ಶಾಪಿಂಗ್​ ಡೇಸ್​' ಸೇಲ್​ ‘ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ ಫ್ಲಿಪ್​ಕಾರ್ಟ್

ಮಂಗಳವಾರ, 6 ಆಗಸ್ಟ್ 2019 (08:58 IST)
ನವದೆಹಲಿ : ಜನಪ್ರಿಯ ಆನ್ ಲೈನ್ ತಾಣವಾದ ಫ್ಲಿಪ್​ಕಾರ್ಟ್​ ತನ್ನ ಗ್ರಾಹಕರಿಗಾಗಿ 'ನ್ಯಾಷನಲ್​​ ಶಾಪಿಂಗ್​ ಡೇಸ್​' ಸೇಲ್​ ಎಂಬ ಹೊಸ ಆಫರ್​ವೊಂದನ್ನು ನೀಡುತ್ತಿದೆ.



ಆಗಸ್ಟ್ 8ರಿಂದ ಆಗಸ್ಟ್ 10ರವರೆಗೆ ಮೂರು ದಿನ ಫ್ಲಿಪ್​ಕಾರ್ಟ್ ನ್ಯಾಶನಲ್ ಶಾಪಿಂಗ್ ಡೇಸ್ ಆಯೋಜಿಸುತ್ತಿದ್ದು, ಈ ವೇಳೆ ಗ್ರಾಹಕರು ಐಸಿಸಿಐ ಬ್ಯಾಂಕ್​ ಕಾರ್ಡ್​ ಬಳಸಿ ವಸ್ತುಗಳನ್ನು ಖರೀದಿಸಿದರೆ, ಅವರಿಗೆ ಶೇ.10ರಷ್ಟು ಡಿಸ್ಕೌಂಟ್​​ ನೀಡುತ್ತಿದೆ.


ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಆಗಸ್ಟ್ 7ರಂದೇ, ಒಂದು ದಿನ ಮುಂಚಿತವಾಗಿ ಆಫರ್  ಪ್ರಯೋಜನ ದೊರೆಯಲಿದೆ. ಅಲ್ಲದೇ ಇದರಲ್ಲಿ ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​, ಲ್ಯಾಪ್​ಟಾಪ್​​​, ಟಿವಿ, ಸ್ಟೀಕರ್​​ಗಳ ಮೇಲೆ ಭರ್ಜರಿ ಆಫರ್​ ನೀಡುತ್ತಿದೆ.


ಜೊತೆಗೆ ಫ್ಲಿಪ್​ಕಾರ್ಟ್​ ಸೂಪರ್​ ಕಾಯಿನ್ಸ್ ಬಳಸಿ ಗ್ಯಾಜೆಟ್​ಗಳನ್ನು ಖರೀದಿಸಬಹುದಾಗಿದೆ. ಅದರ ಜತೆ ಆಯ್ದ ಗ್ಯಾಜೆಟ್‌ಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್, ಕ್ಯಾಶ್‌ಬ್ಯಾಕ್ ಕೊಡುಗೆಗಳು ಲಭ್ಯವಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೆಹಲಿಗೆ ಹಾರಿದ ಸಿಎಂ; ಯಾರಿಗೆ ಸಿಗಲಿದೆ ಮಂತ್ರಿಗಿರಿ?