Publish Date: Fri, 09 Jan 2026 (11:54 IST)
Updated Date: Fri, 09 Jan 2026 (11:55 IST)
ಬೆಂಗಳೂರು: ಅಡಿಕೆ ಬೆಲೆ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದೆ. ಇಂದು ಮತ್ತೆ ಬೆಲೆ ಏರಿಕೆಯಾಗಿರುವುದು ಬೆಳೆಗಾರರಿಗೆ ಖುಷಿ ತಂದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿತ್ತು. ಅಡಿಕೆ ಬೆಲೆ ಇಂದು ಸತತ ಐದನೇ ದಿನ ಏರಿಕೆಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಆದರೆ ನಿನ್ನೆ ಹೊಸ ಅಡಿಕೆ ಬೆಲೆ 10 ರೂ.ಗಳಷ್ಟು ಏರಿಕೆಯಾಗಿ 460 ರೂ.ಗಳಷ್ಟಾಗಿತ್ತು. ಹಳೆ ಅಡಿಕೆ ಬೆಲೆ ನಿನ್ನೆ ಯಥಾಸ್ಥಿತಿಯಲ್ಲಿದ್ದು 545 ರೂ. ಗಳಾಗಿತ್ತು. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 545 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲಿ ಏರಿಕೆಯಾಗಿದೆ. ಹೊಸ ಪಟೋರ 5 ರೂ. ಏರಿಕೆ ಕಂಡಿದ್ದು 390 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 5 ರೂ. ಏರಿಕೆಯಾಗಿದ್ದು 415 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಇಂದು ಯಥಾಸ್ಥಿತಿಯಲ್ಲಿದ್ದು 250 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರವೂ ಯಥಾಸ್ಥಿತಿಯಲ್ಲಿದ್ದು 280 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು 5 ರೂ. ಇಳಿಕೆಯಾಗಿದ್ದು 660 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 225 ರೂ.ಗಳಷ್ಟಾಗಿದೆ.