Publish Date: Thu, 08 Jan 2026 (12:35 IST)
Updated Date: Thu, 08 Jan 2026 (12:36 IST)
ಬೆಂಗಳೂರು: ಅಡಿಕೆ ಬೆಲೆ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದೆ. ಆದರೆ ಮತ್ತೆ ಬೆಲೆ ಏರಿಕೆಯಾಗಿರುವುದು ಬೆಳೆಗಾರರಿಗೆ ಖುಷಿ ತಂದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿತ್ತು. ಅಡಿಕೆ ಬೆಲೆ ಇಂದು ಸತತ ನಾಲ್ಕನೇ ದಿನ ಏರಿಕೆಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಆದರೆ ನಿನ್ನೆ ಹೊಸ ಅಡಿಕೆ ಬೆಲೆ 5 ರೂ.ಗಳಷ್ಟು ಏರಿಕೆಯಾಗಿ 450 ರೂ.ಗಳಷ್ಟಾಗಿತ್ತು. ಇಂದು ಯಥಾಸ್ಥಿತಿಯಲ್ಲಿದೆ. ಹಳೆ ಅಡಿಕೆ ಬೆಲೆ ನಿನ್ನೆ 5 ರೂ. ಏರಿಕೆಯಾಗಿದ್ದು 545 ರೂ. ಗಳಾಗಿತ್ತು. ಇಂದೂ ಅದೇ ಬೆಲೆಯಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 545 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಏರಿಕೆಯಾಗಿದ್ದರೆ ಮತ್ತು ಹಳೆ ಪಟೋರ ದರದಲ್ಲಿ ಯಥಾಸ್ಥಿತಿಯಲ್ಲಿದೆ. ಹೊಸ ಪಟೋರ 15 ರೂ. ಏರಿಕೆ ಕಂಡಿದ್ದು 385 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 410 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಇಂದು 10 ರೂ. ಏರಿಕೆಯಾಗಿದ್ದು 250 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರವೂ 10 ರೂ. ಏರಿಕೆಯಾಗಿ 280 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು ಯಥಾಸ್ಥಿತಿಯಲ್ಲಿದ್ದು 665 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 225 ರೂ.ಗಳಷ್ಟಾಗಿದೆ.