Daily Horoscope

Select Your Language

Notifications

webdunia
webdunia
webdunia
webdunia

Arecanut Price: ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಏರಿಕೆ

Arecanut
ಬೆಂಗಳೂರು: ಅಡಿಕೆ ಬೆಲೆ ಒಂದು ವಾರದಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು ಮತ್ತೆ ಬೆಲೆ ಏರಿಕೆಯಾಗಿರುವುದು ಸಮಾಧಾನ ತಂದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿತ್ತು. ಅಡಿಕೆ ಬೆಲೆ ಇಂದು ಸತತ ಎರಡನೇ ದಿನ ಏರಿಕೆಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.. ಆದರೆ ಇಂದು ಹೊಸ ಅಡಿಕೆ ಬೆಲೆ 5 ರೂ.ಗಳಷ್ಟು ಏರಿಕೆಯಾಗಿ 445 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 5 ರೂ. ಏರಿಕೆಯಾಗಿದ್ದು 540 ರೂ. ಗಳಷ್ಟಿದೆ. ಡಬಲ್ ಚೋಲ್ ಬೆಲೆಯೂ 5 ರೂ. ಏರಿಕೆಯಾಗಿ 540 ರೂ.ಗಳಷ್ಟಾಗಿದೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರದಲ್ಲೂ ಇಂದು ಯಥಾಸ್ಥಿತಿಯಲ್ಲಿದೆ. ಹೊಸ ಪಟೋರ 370 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 410 ರೂ.ಗಳಷ್ಟಿದೆ.  ಹೊಸ ಉಳ್ಳಿ ದರ ಇಂದು  ಯಥಾಸ್ಥಿತಿಯಲ್ಲಿದ್ದು 240 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 270 ರೂ.ಗಳಾಗಿದೆ.

ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು 5 ರೂ. ಇಳಿಕೆಯಾಗಿದ್ದು  665 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು  225 ರೂ.ಗಳಷ್ಟಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ ಮನೆ ಮುಂದೆ ಪಲಾವ್, ನಾಟಿ ಕೋಳಿ ಹಂಚಿದ್ದು ಯಾರು ಗೊತ್ತಿಲ್ಲರೀ... ಸಿದ್ದರಾಮಯ್ಯ