Publish Date: Mon, 05 Jan 2026 (12:26 IST)
Updated Date: Mon, 05 Jan 2026 (12:28 IST)
ಬೆಂಗಳೂರು: ಅಡಿಕೆ ಬೆಲೆ ಒಂದು ವಾರದಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು ಬೆಲೆ ಏರಿಕೆಯಾಗಿರುವುದು ಸಮಾಧಾನ ತಂದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿದೆ. ಅಡಿಕೆ ಬೆಲೆ ಇಳಿಕೆಯಾಗುತ್ತಿದೆಯೇ ಹೊರತು ಏರಿಕೆಯಾಗುತ್ತಿಲ್ಲ ಎಂಬ ಚಿಂತೆ ಬೆಳೆಗಾರರದ್ದು. ಆದರೆ ಇಂದು ಹೊಸ ಅಡಿಕೆ ಬೆಲೆ 15 ರೂ.ಗಳಷ್ಟು ಏರಿಕೆಯಾಗಿ 440 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 10 ರೂ. ಏರಿಕೆಯಾಗಿದ್ದು 535 ರೂ. ಗಳಷ್ಟಿದೆ. ಡಬಲ್ ಚೋಲ್ ಬೆಲೆಯೂ 535 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಇಂದು ಕೊಂಚ ಏರಿಕೆಯಾಗಿದೆ. ಹೊಸ ಪಟೋರ ದರ 5 ರೂ. ಏರಿಕೆಯಾಗಿ 370 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 5 ರೂ. ಏರಿಕೆಯಾಗಿ 410 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಇಂದು 10 ರೂ. ಏರಿಕೆಯಾಗಿದ್ದು 240 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 5 ರೂ. ಏರಿಕೆಯಾಗಿದ್ದು 270 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು 5 ರೂ. ಇಳಿಕೆಯಾಗಿದ್ದು 670 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 225 ರೂ.ಗಳಷ್ಟಾಗಿದೆ.