Select Your Language

Notifications

webdunia
webdunia
webdunia
webdunia

4ಜಿ ಬಳಕೆದಾರರಿಗೆ 3 ತಿಂಗಳ ಉಚಿತ ಡೇಟಾ ಸೇವೆ: ಏರ್‌ಟೆಲ್

4ಜಿ ಬಳಕೆದಾರರಿಗೆ 3 ತಿಂಗಳ ಉಚಿತ ಡೇಟಾ ಸೇವೆ: ಏರ್‌ಟೆಲ್
ನವದೆಹಲಿ , ಶುಕ್ರವಾರ, 23 ಸೆಪ್ಟಂಬರ್ 2016 (20:18 IST)
ದೇಶದ ಅತೀ ದೊಡ್ಡ ನೆಟ್‌ವರ್ಕ ಹೊಂದಿರುವ ಭಾರತೀಯ ಏರ್‌ಟೆಲ್ 4 ಜಿ ಬಳಕೆದಾರರಿಗೆ ಮೂರು ತಿಂಗಳ ಕಾಲ ಉಚಿತ ಡೇಟಾ ಸೇವೆ ನೀಡಲು ಮುಂದಾಗಿದೆ. 
ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಎದುರಾದ ಹಿನ್ನೆಲೆಯಲ್ಲಿ ಎಲ್ಲಾ ಸಂಸ್ಥೆಗಳು ಕರೆ ಹಾಗೂ ಇಂಟರ್‌ನೆಟ್ ಸೇವೆಯ ದರವನ್ನು ಕಡಿತ ಮಾಡುತ್ತಿವೆ. ಈ ಬೆನ್ನಲ್ಲೆ ಏರ್‌ಟೆಲ್ ನೆಟ್‌ವರ್ಕ್ ಡೇಟಾ ಹಾಗೂ ಕರೆಗಳ ದರದಲ್ಲಿ ಭಾರಿ ಕಡಿತಗೊಳಿಸಲು ನಿರ್ಧರಿಸಿದೆ. 
 
ಏರ್‌ಟೆಲ್ 4 ಜಿ ಗ್ರಾಹಕರು ಕೇವಲ 1495 ರೂಪಾಯಿಗಳ ರಿಚಾರ್ಜ್ ಮಾಡಿಕೊಳ್ಳುವ ಮೂಲಕ ಮೂರು ತಿಂಗಳ ಕಾಲ 30 ಜಿಬಿಯಷ್ಟು 4 ಜಿ ಡೇಟಾ ಸೇವೆ ತದನಂತರ ಅನಿಯಮಿತ ಇಂಟರ್‌ನೆಟ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ನಗರಗಳ ಮೇಲೆ ದಾಳಿ ನಡೆಸಲು ಸ್ಕೆಚ್ ರೂಪಿಸಿದ ಪಾಕ್