ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಜಿಯೋ ನೆಟ್‌ವರ್ಕ್ ಮಾರುಕಟ್ಟೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಶೇರುಪೇಟೆಯಲ್ಲಿ ಏರ್‌ಟೆಲ್ ಮತ್ತು ವೋಡಾಫೋನ್, ಐಡಿಯಾ ಶೇರುಗಳ ಮಾಲ್ಯದಲ್ಲಿ ಭಾರಿ ಕುಸಿತವಾಗಿದೆ.
ಜಿಯೋ ನೆಟ್‌ವರ್ಕ್ ಮಾರುಕಟ್ಟೆ ಪ್ರವೇಶದಿಂದ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ದಿಗ್ಗಜ ಕಂಪೆನಿಗಳ ಶೇರುಗಳು ಪಾತಾಳಕ್ಕೆ ಕುಸಿದಿವೆ.
ಜಿಯೋ ಪ್ರವೇಶ ಘೋಷಿಸುತ್ತಿದ್ದಂತೆ ಕೇವಲ 45 ನಿಮಿಷಗಳ ಅವಧಿಯಲ್ಲಿ ಏರ್‌ಟೆಲ್ ಸಂಸ್ಥೆ 9840 ಕೋಟಿ ರೂ ನಷ್ಟ ಅನುಭವಿಸಿದ್ದರ ಐಟಿಯಾ ಸಂಸ್ಥೆ 2480 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ.
ಜಿಯೋ ಪ್ರವೇಶ ಮೊಬೈಲ್ ಕ್ಷೇತ್ರದಲ್ಲಿ ಹೊಸತೊಂದು ಕ್ರಾಂತಿಯನ್ನು ತಂದಿದ್ದು, ವಿಶ್ವದಲ್ಲಿಯೇ ಅತಿ ಕಡಿಮೆ ದರವನ್ನು ನಿಗದಿಪಡಿಸುವುದಾಗಿ ಕಂಪೆನಿ ಘೋಷಿಸಿದೆ.
90 ದಿನಗಳ ಕಾಲ ಉಚಿತ ಕರೆ. ಡೇಟಾ, ವೈಸ್ ಕಾಲ್, ರೋಮಿಂಗ್ ಉಚಿತ ಸೇವೆ ನೀಡಲಿದೆ. ದೇಶಾದ್ಯಂತ ಮೊಬೈಲ್ ಕಂಪೆನಿಗಳು ತಲ್ಲಣಗೊಂಡಿದ್ದು ಹಾಸ ಮೊಬೈಲ್ ಕ್ರಾಂತಿ ಯಾವ ಸ್ವರೂಪ ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ