Select Your Language

Notifications

webdunia
webdunia
webdunia
webdunia

ವಿಡಿಯೋ: ಪಾಕ್ ವಿರುದ್ಧ ನಮ್ಮ ಸೈನಿಕ ತೊಡೆ ತಟ್ಟಿದ ಪರಿ ನೋಡಿ

ವಿಡಿಯೋ: ಪಾಕ್ ವಿರುದ್ಧ ನಮ್ಮ ಸೈನಿಕ ತೊಡೆ ತಟ್ಟಿದ ಪರಿ ನೋಡಿ
ನವದೆಹಲಿ , ಮಂಗಳವಾರ, 20 ಸೆಪ್ಟಂಬರ್ 2016 (10:50 IST)
ಸೆಪ್ಟೆಂಬರ್ 18 ರಂದು ಕಾಶ್ಮೀರದಲ್ಲಿ 17 ಸೈನಿಕರ ಹತ್ಯೆಯಾದ ಸುದ್ದಿ ಹರಡುತ್ತಿದ್ದಂತೆ ಸಂಪೂರ್ಣ ದೇಶವೇ ಒಮ್ಮೆ ನಡುಗಿ ಬಿಟ್ಟಿತು. ಘಟನೆಯಲ್ಲಿ ಇತರೆ 19 ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅದರಲ್ಲಿ ಮೂವರು ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದರು. ಅಮಾಯಕರ ರಕ್ತ ಹರಿಸಿದ್ದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 

ತನ್ನ ಸಹೋದ್ಯೋಗಿಗಳು ಹುತಾತ್ಮರಾದ ಬೆನ್ನಲ್ಲೇ ಸೈನಿಕನೊಬ್ಬ ಪಾಕಿಸ್ತಾನಕ್ಕೆ ಖಡಕ್ ಆಗಿ ಟಾಂಗ್ ನೀಡಿದ್ದಾನೆ. ಜನಪ್ರಿಯ ದೇಶಪ್ರೇಮದ ಹಾಡನ್ನು ಹೇಳಿರುವ ಆತ, 'ಕಾಶ್ಮೀರ್ ತೋ ಹೋಗಾ, ಪಾಕಿಸ್ತಾನ್ ನಹೀ ಹೋಗಾ' ಎಂದು ಅಬ್ಬರಿಸಿದ್ದಾನೆ. ಇದಕ್ಕೆ ಆತನ ಸಹೋದ್ಯೋಗಿಗಳು ಸಹ ಸಾಥ್ ನೀಡಿದ್ದಾರೆ. 
 
ಈ ವಿಡಿಯೋ ಈಗ ದೇಶಾದ್ಯಂತ ವೈರಲ್ ಆಗಿ ಹರಿದಾಡುತ್ತಿದೆ.
 
ವಿಡಿಯೋ: ಪಾಕ್ ವಿರುದ್ಧ ನಮ್ಮ ಸೈನಿಕ ತೊಡೆ ತಟ್ಟಿದ ಪರಿ ನೋಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರ ವಿಚಾರದಲ್ಲಿ ಮೋದಿ ಮಹಾಮೌನಿ: ಯು.ಟಿ.ಖಾದರ್