Select Your Language

Notifications

webdunia
webdunia
webdunia
webdunia

ಯುಎಸ್ ಓಪನ್: ಶುಭಾರಂಭ ಮಾಡಿದ ಭಾರತೀಯರು

ಯುಎಸ್ ಓಪನ್: ಶುಭಾರಂಭ ಮಾಡಿದ ಭಾರತೀಯರು
ನ್ಯೂಯಾರ್ಕ್ , ಶುಕ್ರವಾರ, 2 ಸೆಪ್ಟಂಬರ್ 2016 (18:09 IST)
ಅಮೇರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಶುಭಾರಂಭ ಮಾಡಿದ್ದಾರೆ. 

ಮಹಿಳೆಯರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಭಾರತದ ಸಾನಿಯಾ ಮತ್ತು ಜೆಕ್ ಗಣರಾಜ್ಯದ ಬಾರ್ಬಕಾ ಸ್ಟ್ರೈಕೋವಾ 6-3, 6-2ರ ನೇರ ಸೆಟ್‌ಗಳಿಂದ ಅಮೇರಿಕದ ಜಡಾ ಮೈಯಿ ಹಾರ್ತ್ ಮತ್ತು ಎನಾ ಶಿಬಹರಾ ವಿರುದ್ಧ ಜಯ ಸಾಧಿಸಿದರು.
 
ಹಾಲಿ ಮಿಶ್ರ ಡಬಲ್ಸ್ ಚಾಂಪಿಯನ್ ಪೇಸ್ ಮತ್ತು ಸ್ವಿಟ್ಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ 6-3, 6-2ರ ನೇರ್ ಸೆಟ್‌ಗಳಿಂದ ಅಮೇರಿಕದ ಸಚಿಯಾ ವಿಕೆರಿ ಮತ್ತು ಫ್ರಾನ್ಸಿನ ತಿಯಾಪೊಯೆ ಅವರನ್ನು ಸೋಲಿಸಿ ಮುಂದಿನ ಹಂತಕ್ಕೆ ತಲುಪಿದ್ದಾರೆ. 
 
ಪುರುಷರ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ ಮತ್ತು ಡೆನ್ಮಾರ್ಕ್‌ನ  ಫೆಡೆರಿಕ್ ನೀಲ್ಸನ್, ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಮತ್ತು ಸರ್ಬಿಯಾದ ನೆನೆದಾ ಜಿಮೊಂಜಿಚ್ ಅವರನ್ನು6-3, 6-7 ಮತ್ತು 6-3 ರಿಂದ ಮಣ್ಣು ಮುಕ್ಕಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

18 ಬಾಲ್‌ಗಳಲ್ಲಿ 50- ಲಂಕಾ ಬೌಲಿಂಗ್ ಚಿಂದಿ ಉಡಾಯಿಸಿದ ಅರೋನ್ ಫಿಂಚ್ (ವಿಡಿಯೋ)