Select Your Language

Notifications

webdunia
webdunia
webdunia
webdunia

4 ಜಿ ಇಂಟರ್ನೆಟ್ ವಿಚಾರದಲ್ಲಿ ಭಾರತ, ಪಾಕಿಸ್ತಾನಕ್ಕಿಂತಲೂ ಕಳಪೆ!

4 ಜಿ ಇಂಟರ್ನೆಟ್ ವಿಚಾರದಲ್ಲಿ ಭಾರತ, ಪಾಕಿಸ್ತಾನಕ್ಕಿಂತಲೂ ಕಳಪೆ!
ನವದೆಹಲಿ , ಬುಧವಾರ, 18 ಜುಲೈ 2018 (09:44 IST)
ನವದೆಹಲಿ: ಭಾರತದಲ್ಲಿ ಸದ್ಯ ಎಲ್ಲಿ ನೋಡಿದರೂ 4 ಜಿ ಹವಾ. ಜತೆಗೆ ಕೆಲವೇ ದಿನಗಳಲ್ಲಿ5 ಜಿ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಟೆಲಿಕಾಂ ಸಂಸ್ಥೆಗಳು ವಿಚಾರ ಮಾಡುತ್ತಿವೆ.

ಹಾಗಿದ್ದರೂ ಭಾರತದ 4 ಜಿ ಸ್ಪೀಡ್ ಏನೇನೂ ಸಾಲದು. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ 4 ಜಿ ಇಂಟರ್ನೆಟ್ ಸ್ಪೀಡ್ ತುಂಬಾ ಕಡಿಮೆ. ಎಷ್ಟೆಂದರೆ ನಮಗಿಂತ ಹೆಚ್ಚು 4 ಜಿ ಸ್ಪೀಡ್ ವಿಚಾರದಲ್ಲಿ ಪಾಕಿಸ್ತಾನವೇ ಮುಂದಿದೆಯಂತೆ!

4 ಜಿ ಸೇವೆ ಒದಗಿಸುವ ಒಟ್ಟು 124 ರಾಷ್ಟ್ರಗಳ ಪೈಕಿ ಭಾರತಕ್ಕೆ ಕೇವಲ 109 ನೇ ಸ್ಥಾನವಿದೆಯಷ್ಟೇ. ಭಾರತದಲ್ಲಿ ಸರಾಸರಿ 6.1 ಎಂಬಿಪಿಎಸ್ ವೇಗದಲ್ಲಿ 4 ಜಿ ಇಂಟರ್ನೆಟ್ ಸಿಗುತ್ತಿದೆಯಷ್ಟೇ .ಆದರೆ ನೆರೆಯ ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್ ನಂತಹ ದೇಶಗಳಲ್ಲಿ 13.56 ಅಥವಾ 15.56 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸಿಗುತ್ತಿದೆ. ಹೀಗಾಗಿ ಭಾರತದಲ್ಲಿ 4 ಜಿ ಸೇವೆ ಆರಂಭವಾಗಿ ಇಷ್ಟು ದಿನವಾದರೂ ಇನ್ನೂ ವಿಡಿಯೋ ಕುಂಟುತ್ತಾ, ಬಫರ್ ಮಾಡುತ್ತಾ ನೋಡುವ ಪರಿಸ್ಥಿತಿಯಿದೆ ಎಂದು ಖಾಸಗಿ ಸಂಸ್ಥೆಯ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ ಗಾಂಧಿಯನ್ನು ‘ವಿದೇಶಿ’ ಎಂದಿದ್ದಕ್ಕೆ ತನ್ನ ಪಕ್ಷದ ನಾಯಕನಿಗೆ ಮಾಯಾವತಿ ನೀಡಿದ ಶಿಕ್ಷೆಯೇನು ಗೊತ್ತಾ?!